ADVERTISEMENT

ತಿರುಪತಿ: ಏ.12ರಿಂದ ಸರ್ವದರ್ಶನ ಟೋಕನ್‌ ವಿತರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 21:09 IST
Last Updated 7 ಏಪ್ರಿಲ್ 2021, 21:09 IST

ಹೈದರಾಬಾದ್: ತಿರುಪತಿಯಲ್ಲಿ ಸರ್ವದರ್ಶನ ಟೋಕನ್‌ಗಳ ವಿತರಣೆಯನ್ನು ಏಪ್ರಿಲ್‌ 12ರಿಂದ ಸ್ಥಗಿತಗೊಳಿಸಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ.

ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ತಿರುಪತಿಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿವೆ. ಟೋಕನ್‌ಗಳಿಗಾಗಿ ಸಾವಿರಾರು ಭಕ್ತಾದಿಗಳು ಭೂದೇವಿ ಕಾಂಪ್ಲೆಕ್ಸ್‌ ಮತ್ತು ವಿಷ್ಣು ನಿವಾಸದಲ್ಲಿ ಕಾಯಬೇಕಾಗುವುದರಿಂದ ವೈರಸ್‌ ಹಬ್ಬುವ ಸಾಧ್ಯತೆಗಳು ಹೆಚ್ಚು. ಹೀಗಾಗಿ, ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಟೋಕನ್‌ ವಿತರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಸರ್ವದರ್ಶನ ಟೋಕನ್‌ಗಳನ್ನು ಏಪ್ರಿಲ್‌ 11ರ ಸಂಜೆಯವರೆಗೆ ವಿತರಿಸಲಾಗುವುದು. ₹300ಕ್ಕೆ ಆನ್‌ಲೈನ್‌ ಕೋಟಾದ ಅಡಿಯಲ್ಲಿ ನೀಡುವ ಟೋಕನ್‌ಗಳ ವಿತರಣೆ ಮುಂದುವರಿಯಲಿದೆ. ಪ್ರತಿ ದಿನ ಆನ್‌ಲೈನ್‌ನಲ್ಲಿ ಸುಮಾರು 15 ಸಾವಿರ ಟೋಕನ್‌ಗಳನ್ನು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.