ADVERTISEMENT

ಕೋವಿಡ್–19 | ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆ: ಇಂದು 17 ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 8:08 IST
Last Updated 15 ಏಪ್ರಿಲ್ 2020, 8:08 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದ್ದು, ಇದುವರೆಗೆ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಪ್ರಕಟಣೆ ಹೊರಡಿಸಿದೆ.

ಇಂದು ಹೊಸದಾಗಿ ಒಟ್ಟು 17 ಜನರಲ್ಲಿ (15 ಪುರುಷರು, ಇಬ್ಬರು ಮಹಿಳೆಯರಲ್ಲಿ) ಸೋಂಕು ಇರುವುದು ದೃಢಪಟ್ಟಿದೆ.ಮೈಸೂರು ಜಿಲ್ಲೆಯಲ್ಲಿ ಹತ್ತುಪ್ರಕರಣಗಳು ವರದಿಯಾಗಿವೆ.ಉಳಿದಂತೆ, ಬೆಂಗಳೂರು, ಬಾಗಲಕೋಟೆ, ವಿಜಯಪುರದಲ್ಲಿ ತಲಾ ಇಬ್ಬರುಮತ್ತು ಕಲಬುರ್ಗಿಯ ಒಬ್ಬರಿಗೆ ಸೋಂಕು ತಗುಲಿದೆ.

ದೇಶದಲ್ಲಿ ಮೇ 3ರ ವರೆಗೆ ಎರಡನೇ ಹಂತದ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ವಿವಿಧ ರಾಜ್ಯಗಳಲ್ಲಿ ಸದ್ಯ 9,756 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 377 ಮಂದಿ ಮೃತಪಟ್ಟಿದ್ದು, 1305 ಸೋಂಕಿತರು ಗುಣಮುಖರಾಗಿದ್ದಾರೆ.

ADVERTISEMENT

ಮೈಸೂರಿನಲ್ಲಿ ಒಂದೇ ದಿನ 10 ಮಂದಿಗೆ ಸೋಂಕು
ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 10 ಮಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಇವರಲ್ಲಿ ಎಂಟು ಮಂದಿ ನಂಜನಗೂಡು ಔಷಧ ತಯಾರಿಕಾ ಕಂಪನಿವರಾಗಿದ್ದಾರೆ.

ಇದರೊಂದಿಗೆ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ 48 ಕ್ಕೇರಿದೆ. ಈಗಾಗಲೇ 12 ಮಂದಿ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.