ADVERTISEMENT

ಕೋವಿಡ್‌: ತಂತ್ರಜ್ಞಾನ ನಿರ್ವಹಣೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 18:22 IST
Last Updated 8 ಜೂನ್ 2021, 18:22 IST
ಕರ್ನಾಟಕದ ಕೋವಿಡ್‌ ಪ್ರಕರಣಗಳ ಕುರಿತು ಮಾಹಿತಿ ನೀಡುವ ವೆಬ್‌ಸೈಟ್‌ ಪುಟ
ಕರ್ನಾಟಕದ ಕೋವಿಡ್‌ ಪ್ರಕರಣಗಳ ಕುರಿತು ಮಾಹಿತಿ ನೀಡುವ ವೆಬ್‌ಸೈಟ್‌ ಪುಟ   

ಬೆಂಗಳೂರು: ಕೋವಿಡ್‌–19 ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಅಪ್ಲಿಕೇಷನ್‌ಗಳು ಮತ್ತು ತಂತ್ರಜ್ಞಾನಗಳನ್ನು ಏಕೀಕೃತಗೊಳಿಸಿ ಕಾರ್ಯನಿರ್ವಹಿಸಲು, ಸಮಿತಿಯೊಂದನ್ನು ರಚಿಸಲಾಗಿದೆ.

ಈ ಸಮಿತಿಗೆ ಹಿರಿಯ ಐಎಎಸ್‌ ಅಧಿಕಾರಿ ಹಾಗೂ ಕೋವಿಡ್‌ ವಾರ್‌ ರೂಮ್‌ ಉಸ್ತುವಾರಿ ಹೊತ್ತಿರುವ ವಿ.ಪೊನ್ನುರಾಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸದಸ್ಯರನ್ನಾಗಿ ಡಿ.ರಂದೀಪ್, ಡಾ.ಅರುಂಧತಿ ಚಂದ್ರಶೇಖರ್, ಬಿಸ್ವಜಿತ್ ಮಿಶ್ರಾ, ವಿಪಿನ್ ಸಿಂಗ್, ಕುಮಾರ್‌ ಪುಷ್ಕರ್, ಹರೀಶ್‌ ಮತ್ತು ಎಚ್‌.ಎಸ್‌.ಶರತ್ ಅವರನ್ನು ನೇಮಿಸಲಾಗಿದೆ.

ADVERTISEMENT

ಪರಿಹಾರ್‌ ಪೋರ್ಟಲ್‌, ಸಂಪರ್ಕಿತರ ಪತ್ತೆ ಮಾಡುವ ಮೊಬೈಲ್‌ ಆ್ಯಪ್, ಕ್ವಾರಂಟೈನ್‌ ಆ್ಯಪ್, ಕ್ವಾರಂಟೈನ್‌ ಅಲರ್ಟ್‌ ಸಿಸ್ಟಮ್‌, ಆಸ್ಪತ್ರೆಗಳಲ್ಲಿ ಹಾಸಿಗೆಗಳ ನಿರ್ವಹಣೆಯ ವ್ಯವಸ್ಥೆಯ ಅಪ್ಲಿಕೇಷನ್‌ಗಳು ಸೇರಿ ಇತರ ಎಲ್ಲ ಆ್ಯಪ್‌ ಮತ್ತು ತಂತ್ರಜ್ಞಾನ ಏಕೀಕೃತಗೊಳಿಸಿ, ಮಾಹಿತಿ ನಿರ್ವಹಣೆ ಸುವ್ಯಸ್ಥಿತಗೊಳಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ.

ಸಮಿತಿ ಸಭೆ ಸೇರಲು ಆರಂಭಿಸಿದ ಬಳಿಕ ವಾರಕ್ಕೊಮ್ಮೆ ಸರ್ಕಾರಕ್ಕೆ ವರದಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.