ADVERTISEMENT

ಪೌರ ಕಾರ್ಮಿಕರಿಗೆ ಅನಾರೋಗ್ಯ: ಚಾಲಕರಾದ ಪಿಡಿಒ, ಸದಸ್ಯರು

​ಪ್ರಜಾವಾಣಿ ವಾರ್ತೆ
Published 12 ಮೇ 2021, 14:05 IST
Last Updated 12 ಮೇ 2021, 14:05 IST
ಸುಂಟಿಕೊಪ್ಪದಲ್ಲಿ ಪಿಡಿಒ ಮತ್ತು ಸದಸ್ಯರು ಕಸ ವಿಲೇವಾರಿಯ ಆಟೋದ ಚಾಲಕರಾಗಿ ಬುಧವಾರ ಕಾರ್ಯ ನಿರ್ವಹಿಸಿದರು
ಸುಂಟಿಕೊಪ್ಪದಲ್ಲಿ ಪಿಡಿಒ ಮತ್ತು ಸದಸ್ಯರು ಕಸ ವಿಲೇವಾರಿಯ ಆಟೋದ ಚಾಲಕರಾಗಿ ಬುಧವಾರ ಕಾರ್ಯ ನಿರ್ವಹಿಸಿದರು   

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಹಲವು ಪೌರ ಕಾರ್ಮಿಕರಿಗೆ ಕೊರೊನಾ ಮತ್ತು ಅನಾರೋಗ್ಯಪೀಡಿತರಾದ ಹಿನ್ನೆಲೆಯಲ್ಲಿ ಪಟ್ಟಣ ಮತ್ತು ವಿವಿಧ ಬಡಾವಣೆಗಳಲ್ಲಿ ಕಸದ ವಿಲೇವಾರಿಗೆ ತೊಂದರೆಯಾಗದಂತೆ ಬುಧವಾರ ಪಿಡಿಒ ವೇಣುಗೋಪಾಲ್, ಸದಸ್ಯರಾದ ಶಬ್ಬೀರ್ ಮತ್ತು ರಫೀಕ್ ಖಾನ್ ಅವರು ಕಸದ ಆಟೊ ಚಾಲಕರಾಗಿ ಕಾರ್ಯ ನಿರ್ವಹಿಸಿದರು.

ಗ್ರಾಮ ಪಂಚಾಯಿತಿಯ 4 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಅವರೊಂದಿಗೆ ಇದ್ದ ಆಟೊ ಚಾಲಕ ಪ್ರಾಥಮಿಕ ಸಂಪರ್ಕದಿಂದಾಗಿ ಹೋಂ ಕ್ಯಾರಂಟೈನ್‌ ಆಗಿದ್ದಾರೆ. ಆ ಸಮಸ್ಯೆಯನ್ನು ಬಗೆಹರಿಸಲು ಪಿಡಿಒ ಮತ್ತು ಸದಸ್ಯರು ಅವರ ಪರವಾಗಿ ಚಾಲಕರಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT