ಬೆಂಗಳೂರು: ಕೊರೊನೋತ್ತರ ಕಾಲದಲ್ಲಿ ಜೀವ ಉಳಿಸುವುದು ಹಾಗೂ ಜೀವನ ಕಟ್ಟಿಕೊಡುವುದು ಹೇಗೆ ಎಂಬ ವಿಚಾರದಲ್ಲಿ ಶುಕ್ರವಾರ ಇಲ್ಲಿ ವಿವಿಧ ತಜ್ಞರಿಂದ ವಿಚಾರ ಮಂಥನ ನಡೆದಿದೆ. ಚರ್ಚೆ ಸಾರಾಂಶ ಹಾಗೂ ಶಿಫಾರಸು ಒಳಗೊಂಡ ಸಮಗ್ರ ವರದಿಯನ್ನು ಸರ್ಕಾರ ಸಲ್ಲಿಸಲು ಸಭೆ ನಿರ್ಧರಿಸಿದೆ.
ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಡಾ.ಇ.ವಿ.ರಮಣ ರೆಡ್ಡಿ, ರಾಜ್ಯ ಕೋವಿಡ್ ಕಾರ್ಯಪಡೆಯ ಡಾ. ಸಿ.ಎನ್.ಮಂಜುನಾಥ್, ಪ್ರೊ.ಎಸ್.ಅಯ್ಯಪ್ಪನ್ ವಿಚಾರ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.