ADVERTISEMENT

ಬೆಟ್ಟಿಂಗ್‌: ಬುಕ್ಕಿ ಬಂಧನ, ₹2.5 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 18:32 IST
Last Updated 20 ಜನವರಿ 2021, 18:32 IST
ಆನಂದ್‌
ಆನಂದ್‌   

ಬೆಂಗಳೂರು: ಭಾರತ–ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೈರವೇಶ್ವರ ನಗರದ ಆನಂದ್‌ (30) ಬಂಧಿತ ಆರೋಪಿ.

ಆಸ್ಟ್ರೇಲಿಯದಲ್ಲಿಬುಧವಾರ (ಜ.19) ನಡೆಯುತ್ತಿದ್ದ ಕ್ರಿಕೆಟ್‌ ಪಂದ್ಯದ ವೇಳೆ ಸದರಿ ತಂಡಗಳ ಸೋಲು, ಗೆಲುವಿನ ಸಾಧ್ಯತೆ ಆಧರಿಸಿ ಬೆಟ್ಟಿಂಗ್‌ ನಡೆಸುತ್ತಿದ್ದ.

ADVERTISEMENT

ಲೋಟಸ್‌ ಡಾಟ್‌ಕಾಮ್‌ ಎಂಬ ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ‌ ಆರೋಪಿ, ಫೋನ್‌ ಪೇ, ಗೂಗಲ್‌ ಪೇ ಮೂಲಕ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದ. ಕೆಲವರಿಂದ ನಗದು ರೂಪದಲ್ಲೂ ಹಣ ಕಟ್ಟಿಸಿಕೊಳ್ಳುತ್ತಿದ್ದ. ಗೆದ್ದವರಿಗೆ ಹಣ ಕೊಡಲು ಆರೋಪಿ ನಾಗರಬಾವಿ ಮುಖ್ಯರಸ್ತೆಯ ಬೈರವೇಶ್ವರ ನಗರದ ಕಟ್ಟಡವೊಂದರ ಬಳಿಗೆ ಬರುವ ಖಚಿತ ಮಾಹಿತಿ ಸಿಸಿಬಿ ವಿಶೇಷ ವಿಚಾರಣಾ ದಳಕ್ಕೆ ಸಿಕ್ಕಿತ್ತು. ಇದನ್ನು ಆಧರಿಸಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಆರೋಪಿಯನ್ನು ದಸ್ತಗಿರಿ ಮಾಡಿ, ಬೆಟ್ಟಿಂಗ್‌ಗೆ ಸಂಬಂಧಿಸಿದ ₹2.51 ಲಕ್ಷ ನಗದು, ಒಂದು ಮೊಬೈಲನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ಚಂದ್ರಾ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.