ADVERTISEMENT

ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ಕನ್ನಡ ಕಡೆಗಣನೆ: ಜಾಲತಾಣಗಳಲ್ಲಿ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 15:21 IST
Last Updated 24 ಜನವರಿ 2021, 15:21 IST
ಗಣರಾಜ್ಯೋತ್ಸವದ ನಿಮಿತ್ತ ರಾಜಪಥದಲ್ಲಿ ಜ. 26ರಂದು ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ಧಚಿತ್ರ. ಅದರ ಮುಂಭಾಗದಲ್ಲಿ 'ಕರ್ನಾಟಕ' ಎಂದು ಹಿಂದಿಯಲ್ಲಿ ಬರೆದಿರುವುದು (ಪಿಟಿಐ)
ಗಣರಾಜ್ಯೋತ್ಸವದ ನಿಮಿತ್ತ ರಾಜಪಥದಲ್ಲಿ ಜ. 26ರಂದು ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ಧಚಿತ್ರ. ಅದರ ಮುಂಭಾಗದಲ್ಲಿ 'ಕರ್ನಾಟಕ' ಎಂದು ಹಿಂದಿಯಲ್ಲಿ ಬರೆದಿರುವುದು (ಪಿಟಿಐ)   

ಹೊಸಪೇಟೆ: ಗಣರಾಜ್ಯೋತ್ಸವದ ನಿಮಿತ್ತ ರಾಜಪಥದಲ್ಲಿ ಜ. 26ರಂದು ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸ್ತಬ್ಧಚಿತ್ರದಲ್ಲಿ ಕನ್ನಡ ಕಡೆಗಣಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಕನ್ನಡದ ಬದಲು ಹಿಂದಿ ಭಾಷೆಯಲ್ಲಿ ಕರ್ನಾಟಕ ಎಂದು ಬರೆಯಲಾಗಿದೆ. ಇಷ್ಟೇ ಅಲ್ಲ, ಕನ್ನಡ ಬಾವುಟದ ಬದಲು ಕೇಸರಿ ಧ್ವಜ ಬಳಸಲಾಗಿದೆ. ಇದೇ ವಿಷಯ ಈಗ ಟೀಕೆಗೆ ಕಾರಣವಾಗಿದೆ.

ಇದೇನು ಒಕ್ಕೂಟ ವ್ಯವಸ್ಥೆಯ ದೇಶವೋ ಏನು? ಕನ್ನಡ ಬಾವುಟ ಎಲ್ಲಿ? ಗಣತಂತ್ರ ಅಂದರೆ ಒಂದು ಧರ್ಮದ ಬಾವುಟ ಹಾಕುವುದೇ? ಹೀಗೆ ಫೇಸಬುಕ್‌, ಟ್ವಿಟರ್‌ನಲ್ಲಿ ಕನ್ನಡಿಗರು ಪ್ರಶ್ನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.