ಸುವರ್ಣ ಸೌಧದಲ್ಲಿ ಪ್ರತಿಭಟನೆ ನಡೆಸಿದ ಸಿ.ಟಿ ರವಿ
– ಪ್ರಜಾವಾಣಿ ಚಿತ್ರ
ಬೆಳಗಾವಿ (ಸುವರ್ಣ ಸೌಧ): ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಮಾನಹಾನಿ ಹೇಳಿಕೆ ಆರೋಪದ ಕುರಿತು ಬಂಧನಕ್ಕೂ ಮುನ್ನ ಪ್ರತಿಕ್ರಿಯಿಸಿದ ಸಿ.ಟಿ ರವಿ, ‘ಅವರವರ ಭಾವನೆಗೆ ತಕ್ಕಂತೆ ಭಾವಿಸಿದರೆ ನಾವು ಏನೂ ಮಾಡಲು ಸಾಧ್ಯ? ನಾನು ತಪ್ಪು ಮಾತನಾಡಿದ್ದು ರೆಕಾರ್ಡ್‌ನಲ್ಲಿದ್ದರೆ ಅದನ್ನು ತೋರಿಸಲಿ. ಅವರ ಕಲ್ಪನೆಯ ಪ್ರಶ್ನೆಗೆ ನಾನು ಉತ್ತರಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಾರು ಏನು ಹೇಳಿದರು ಎನ್ನುವುದು ಆನ್ ರೆಕಾರ್ಡ್ ಆಡಿಯೊ ಮತ್ತು ವಿಡಿಯೊದಲ್ಲಿ ಇರುತ್ತದೆ. ಯಾರು ಏನೇನು ಮಾತನಾಡಿದರು ಎನ್ನುವುದು ಅದರಲ್ಲಿ ಗೊತ್ತಾಗುತ್ತದೆ’ ಎಂದರು.
‘ಮುಖ್ಯಮಂತ್ರಿಯಷ್ಟು ನಾನು ಕಾನೂನು ಪಂಡಿತನಲ್ಲ, ಯಾವುದು ಕ್ರಿಮಿನಲ್ ಅಪರಾಧ ಎನ್ನುವುದು ಅವರಷ್ಟು ನನಗೆ ತಿಳಿದಿಲ್ಲ. ಮತ್ತೆಮತ್ತೆ ಹೇಳುತ್ತಿದ್ದೇನೆ, ಆಡಿಯೋ, ವಿಶುಯಲ್ಸ್ ಪರೀಕ್ಷೆ ಮಾಡಲಿ. ನಾನು ತಪ್ಪು ಪದ ಬಳಸಿದ್ದೇ ಆದಲ್ಲಿ, ಇಷ್ಟೊತ್ತಿಗೆ ಅದು ಸುದ್ದಿ ಆಗುತ್ತಿರಲಿಲ್ಲವೇ’ ಎಂದು ಸಿ.ಟಿ. ರವಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.