ಸಿ.ಟಿ. ರವಿ
ಬೆಂಗಳೂರು: ಗ್ಯಾಂಗ್‌ರೇಪ್, ಕಾಲ್ತುಳಿತ, ಆತ್ಮಹತ್ಯೆ, ಕೊಲೆಗಳ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುತ್ತಿದೆ. ರಾಜ್ಯದ ಬೇಹುಗಾರಿಕಾ ದಳ ಕೋಮಾ ಸ್ಥಿತಿಗೆ ತಲುಪಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ ರಾಜ್ಯದಲ್ಲಿ ದಾಳಿ ನಡೆಸಿದೆ. ಜೀವಾವಧಿ ಶಿಕ್ಷೆಗೆ ಒಳಗಾದ ಮೂವರನ್ನು ಬಂಧಿಸಿದೆ. ಪರಪ್ಪನ ಅಗ್ರಹಾರದಲ್ಲಿ ರಾಷ್ಟ್ರ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಅಪರಾಧಿಗಳು ಕಾರಾಗೃಹವನ್ನೇ ಸೂಪರ್ ಮಾರ್ಕೆಟ್ ಮಾಡಿಕೊಂಡಿದ್ದಾರೆ. ನಾಸೀರ್‌ನಂತಹ ಉಗ್ರನಿಗೆ ಎಲ್ಲ ಸೌಲಭ್ಯವೂ ಸಿಗುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗದೇ ಹೋದರೆ ಅಧಿಕಾರ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.
ಆಂತರಿಕ ರಕ್ಷಣಾ ವಿಭಾಗದಲ್ಲಿ ದಕ್ಷ ಅಧಿಕಾರಿಗಳು ಇಲ್ಲ. ಅದು ಶಿಕ್ಷೆಗೊಳಗಾದ ಅಧಿಕಾರಿಗಳ ವರ್ಗಾವಣೆಯ ಕೇಂದ್ರವಾಗಿದೆ. ರೇಟ್ ಕಾರ್ಡ್ ಆಧಾರದಲ್ಲಿ ಹಣ ಕೊಟ್ಟವರಿಗೆ ಪ್ರಮುಖ ಹುದ್ದೆ ಸಿಗುತ್ತಿವೆ. ಹಾಗಾಗಿ, ಬೇಹುಗಾರಿಕಾ ವ್ಯವಸ್ಥೆ, ಐಎಸ್‍ಡಿ ವಿಫಲವಾಗಿವೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.