ADVERTISEMENT

ದರ್ಶನ್‌ ಇಲ್ಲದಿದ್ದಾಗ ಮಾತನಾಡುತ್ತಾರೆ: ವಿಜಯಲಕ್ಷ್ಮಿ ಹೀಗೆ ಹೇಳಿದ್ದು ಯಾರಿಗೆ?

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 17:00 IST
Last Updated 21 ಡಿಸೆಂಬರ್ 2025, 17:00 IST
   

ದಾವಣಗೆರೆ: ‘ದರ್ಶನ್‌ ಇಲ್ಲದೇ ಇರುವಾಗ ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ವೇದಿಕೆ, ಟಿವಿ ಪರದೆಯ ಮೇಲೆ ದರ್ಶನ್‌ ಹಾಗೂ ಅಭಿಮಾನಿಗಳ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ದರ್ಶನ್‌ ಇದ್ದಾಗ ಇವರು ಎಲ್ಲಿ ಮಾಯ ಆಗ್ತಾರೊ ಗೊತ್ತಿಲ್ಲ..’ ಎಂದು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹೇಳಿದರು.

ನಟ ದರ್ಶನ್‌ ಅಭಿನಯದ ‘ದಿ ಡೆವಿಲ್‌’ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ಭೇಟಿಯಾಗಲು ವಿಜಯಲಕ್ಷ್ಮಿ ಅವರು ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ಭಾನುವಾರ ಭೇಟಿ ನೀಡಿದ್ದರು.

ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂತಹ ಮಾತುಗಳಿಗೆ ಯಾರೂ ಕೋಪ ಮಾಡಿಕೊಳ್ಳಬಾರದು. ಬೇಜಾರು ಮಾಡಿಕೊಳ್ಳಬಾರದು’ ಎಂದು ಕೋರಿಕೊಂಡರು.

ADVERTISEMENT

‘ಕನ್ನಡ ಚಿತ್ರರಂಗದ ಎಲ್ಲ ಸಿನಿಮಾಗಳನ್ನು ಬೆಂಬಲಿಸಿ. ‘ದಿ ಡೆವಿಲ್‌’ ವೀಕ್ಷಿಸಿ’ ಎಂದು ನಟಿ ರಚನಾ ರೈ ಮನವಿ ಮಾಡಿದರು. ಹುಲಿ ಕಾರ್ತಿಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.