ADVERTISEMENT

ದರ್ಶನ್ ಕೇಸ್: ದೋಷಾರೋಪ ಪಟ್ಟಿ ಗೋಪ್ಯ ದಾಖಲೆ ಅಲ್ಲ– ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:49 IST
Last Updated 10 ಸೆಪ್ಟೆಂಬರ್ 2024, 14:49 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ‘ದೋಷಾರೋಪ ಪಟ್ಟಿ ಗೋಪ್ಯ ದಾಖಲಾತಿಯೇನೂ ಅಲ್ಲ. ಅದರಲ್ಲಿರುವ ಮಾಹಿತಿ ಸಹಜವಾಗಿ ಹೊರಗೆ ಬರುತ್ತದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ‌ ಪ್ರಕರಣದ ದೋಷಾರೋಪಣೆ ಪಟ್ಟಿಯಲ್ಲಿರುವ ಅಂಶಗಳು ಬಹಿರಂಗ ಆಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪೊಲೀಸರು ದೋಷಾರೋಪ ಪಟ್ಟಿ ಜತೆಗೆ, ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ನೀಡುತ್ತಾರೆ.‌ ಅದನ್ನು ಪ್ರತಿವಾದಿಯ ವಕೀಲರಿಗೆ ನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT