ADVERTISEMENT

ರಾಜ್ಯದಲ್ಲಿ ಡೆಂಗಿಗೆ ಮೂವರು ಬಲಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
   

ಬೆಂಗಳೂರು: ಜನವರಿಯಿಂದ ಈವರೆಗೆ (ಜುಲೈ 22) ರಾಜ್ಯದಲ್ಲಿ ಮೂವರು ಡೆಂಗಿಯಿಂದ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಮನಗರದಲ್ಲಿ ಫೆಬ್ರುವರಿ 15ರಂದು, ಚಿತ್ರದುರ್ಗದಲ್ಲಿ ಮೇ 20ರಂದು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್‌ 26ರಂದು ತಲಾ ಒಬ್ಬರು ಡೆಂಗಿಗೆ ಬಲಿಯಾಗಿದ್ದಾರೆ ಎಂದು ರಾಜ್ಯಮಟ್ಟದ ಸಾವುಗಳ ಲೆಕ್ಕಪರಿಶೀಲನಾ ಸಮಿತಿ ದೃಢಪಡಿಸಿದೆ.ಈ ಅವಧಿಯಲ್ಲಿ ಒಟ್ಟು 19,784 ಶಂಕಿತ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, 13,175 ರೋಗಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಈ ಪೈಕಿ, 1,926 ಜನರಿಗೆ ಡೆಂಗಿ ಇದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 64, 613 ಶಂಕಿತ ಡೆಂಗಿ ಪ್ರಕರಣ ಪತ್ತೆಯಾಗಿದ್ದು, 15,683 ರೋಗಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 3,393 ಜನರಿಗೆ ಡೆಂಗಿ ಇರುವುದು ದೃಢಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.