ADVERTISEMENT

DH-PV Eduverse | ನೀಟ್‌, ಸಿಇಟಿ: ‘ಎಡ್ಯುವರ್ಸ್‌’ ಪಕ್ಷಿನೋಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 15:22 IST
Last Updated 7 ಏಪ್ರಿಲ್ 2025, 15:22 IST
ಲೋಗೊ
ಲೋಗೊ   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏ.16,17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯುತ್ತಿದ್ದು, ಪರೀಕ್ಷೆಯ ಪೂರ್ವಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಇಡೀ ಪ್ರಕ್ರಿಯೆಯ ಪಕ್ಷಿನೋಟ ಒದಗಿಸಲಿದೆ ‘ಎಡ್ಯುವರ್ಸ್‌’.  

ಬೆಂಗಳೂರು ಅರಮನೆ ಮೈದಾನದಲ್ಲಿ (ತ್ರಿಪುರವಾಸಿನಿ) ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಾದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಏಪ್ರಿಲ್‌ 12 ಮತ್ತು 13ರಂದು ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳವು ‘ಎಡ್ಯುವರ್ಸ್‌’ ಸಿಇಟಿ, ನೀಟ್‌ ಪರೀಕ್ಷೆ, ನಂತರದ ಭವಿಷ್ಯ ಕುರಿತು ಖಚಿತ ಮಾಹಿತಿಯ ಆಗರವಾಗಿರಲಿದೆ.

ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಜ್ಞಾನದ ಜತೆಗೆ, ಭವಿಷ್ಯವನ್ನೂ ಭದ್ರಮಾಡಬೇಕು. ಆದಾಯದ ಮೂಲವೂ ಆಗಬೇಕು. ಜೀವನಕ್ಕೆ ಆದಾಯವೂ ಮುಖ್ಯ. ಆಯ್ಕೆ ಮಾಡಿಕೊಂಡ ವೃತ್ತಿಯ ಜತೆಗೆ ನಿವೃತ್ತಿಯವರೆಗೂ ಸಾಗಬೇಕಿದೆ. ಅದಕ್ಕಾಗಿ ಮುಂದೊಂದು ದಿನ ವೃತ್ತಿಯ ಆಯ್ಕೆ ತಪ್ಪು ಎನಿಸದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ‘ಆ್ಯಡ್‌ 6 ಅಡ್ವರ್ಟೈಸಿಂಗ್‌‘ ಸಹಯೋಗದ ಈ ಶೈಕ್ಷಣಿಕ ಮೇಳ ನೆರವಾಗಲಿದೆ.  

ADVERTISEMENT

ಸಿಇಟಿ, ನೀಟ್‌ ಪ್ರಕ್ರಿಯೆ ಮತ್ತು ‘ಎಡ್ಯುವರ್ಸ್‌’:

ಸಿಇಟಿ ಪರೀಕ್ಷೆ ಬರೆಯಲು ಹಾಗೂ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಹಂಚಿಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಈ ಬಾರಿ 3.71 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ ಅವರಲ್ಲಿ 3.30 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. 41 ಸಾವಿರ ಅಭ್ಯರ್ಥಿಗಳು ವೈದ್ಯಕೀಯ ನೀಟು ಹಂಚಿಕೆ ಕೋರಿ ನೋಂದಣಿ ಮಾಡಿಕೊಂಡಿದ್ದಾರೆ. 

ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್‌-25ರಲ್ಲಿ ಅರ್ಹತೆ ಪಡೆಯಬೇಕು ಹಾಗೂ ಕಡ್ಡಾಯವಾಗಿ ಕೆಇಎನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರಬೇಕು. ಇಂತಹ ಎಲ್ಲ ವಿಷಯಗಳ ಸಂಪೂರ್ಣ ಮಾಹಿತಿಯನ್ನು ‘ಎಡ್ಯುವರ್ಸ್‌’ ನೀಡುವ ಜತೆಗೆ, ಗೊಂದಲಗಳಿಗೆ ಪರಿಹಾರ ಕಲ್ಪಿಸಲಿದೆ.

ದಯಾನಂದ ಸಾಗರ್‌ ವಿಶ್ವವಿದ್ಯಾಲಯ, ಐಸಿಎಫ್‌ಎಐ, ಮಾಹೆ, ಸಪ್ತಗಿರಿ ಎನ್‌ಪಿಎಸ್, ಪಾರುಲ್‌ ವಿಶ್ವವಿದ್ಯಾಲಯ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ಗೀತಂ ವಿಶ್ವವಿದ್ಯಾಲಯ, ಎಸ್‌ಆರ್‌ಎಂ ವಿಶ್ವವಿದ್ಯಾಲಯ, ಕೆಎಲ್‌ಇ, ಕೆಎಸ್‌ಜಿಐ, ಆಕ್ಸ್‌ಫರ್ಡ್‌ ಶಿಕ್ಷಣ ಸಂಸ್ಥೆಗಳು, ಎಎಂಸಿ, ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜು, ಎಂವಿಐಟಿ, ಎಂಐಟಿ -ಡಬ್ಲ್ಯೂಪಿಯು, ಎಐಎಂಎಸ್, ಹಿಂದೂಸ್ತಾನ್‌ ಅಕಾಡೆಮಿ, ವಿದ್ಯಾವರ್ಧಕ, ಹರ್ಷ ಸಂಸ್ಥೆಗಳು, ಡಾ.ಎಸ್. ಆರ್. ಚಂದ್ರಶೇಖರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌, ಮಹಾರಾಜ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಆಕಾಶ್ ಗ್ರೂಪ್‌, ಎಸ್.ಇ.ಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್, ವಿಷನ್ ಐಎಎಸ್, ಎಸ್‌ಡಿಎಂ -ಉಜಿರೆ, ಸೌಂದರ್ಯ ಗ್ರೂಪ್, ಆರ್‌ವಿ ವಿಶ್ವವಿದ್ಯಾಲಯ, ಜಿಎಸ್‌ಎಸ್‌ಎಸ್, ಕೆಎಸ್‌ಒಯು, ಎಎಂಇಟಿ ವಿಶ್ವವಿದ್ಯಾಲಯ, ಸಂಜಯ್ ಗೋದಾವತ್‌, ಎಂಐಟಿ ಎಡಿಟಿ ಸೇರಿದಂತೆ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳು, ಪೋಷಕರಿಗೆ ದಾರಿ ತೋರಲಿವೆ.  

ಆಯೋಜನೆ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’

ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು

ದಿನಾಂಕ: ಏಪ್ರಿಲ್‌ 12–13

ಸಮಯ: ಬೆಳಿಗ್ಗೆ 10ರಿಂದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.