ಸಾಕ್ಷಿ ದೂರುದಾರ ಮಾಸ್ಕ್ ಧರಿಸಿರುವವರು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ನಾಗಮಂಗಲ (ಮಂಡ್ಯ ಜಿಲ್ಲೆ): ‘ಆತ ಒಳ್ಳೆಯವನಲ್ಲ, ನನಗೂ ನನ್ನ ಮಕ್ಕಳಿಗೂ ಹಿಂಸೆ ಕೊಡುತ್ತಿದ್ದ. ಆತ ಧರ್ಮಸ್ಥಳದ ವಿಚಾರವಾಗಿ ಅಪಪ್ರಚಾರ ಮಾಡುತ್ತಿರುವುದು ಸತ್ಯವಲ್ಲ. ದುಡ್ಡಿನ ಆಮಿಷಕ್ಕೆ ಹೀಗೆ ಮಾಡುತ್ತಿರಬಹುದು’ ಎಂದು ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರನ ಮೊದಲ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆ ದೂರಿದ್ದಾರೆ.
ಪಟ್ಟಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಆತನನ್ನು 1999ರಲ್ಲಿ ಮದುವೆಯಾಗಿದ್ದೆ. 7 ವರ್ಷ ಜೊತೆಗಿದ್ದೆವು. ನನಗೆ ಹೊಡೆದು ಹಿಂಸಿಸುತ್ತಿದ್ದ. ನಮಗೆ ಮಗ ಮತ್ತು ಮಗಳಿದ್ದಾಳೆ. ಧರ್ಮಸ್ಥಳದಲ್ಲಿ ಕಸ ಗುಡಿಸುತ್ತಿದ್ದ, ಶೌಚಾಲಯ ತೊಳೆಯುತ್ತಿದ್ದ’ ಎಂದಿದ್ದಾರೆ.
‘ಜೀವನಾಂಶ ಕೊಡಬೇಕಾಗುತ್ತದೆ ಎಂದು, ವಿವಾಹ ವಿಚ್ಛೇದನದ ವೇಳೆ ತನಗೆ ಉದ್ಯೋಗವಿಲ್ಲವೆಂದು ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದ. ಅಲ್ಲಿಯೂ ನನಗೆ ನ್ಯಾಯ ಸಿಗದಂತೆ ಮೋಸ ಮಾಡಿದ. ನನ್ನ ತಾಯಿಯೇ ನನ್ನ ಮಕ್ಕಳನ್ನು ಸಾಕಿದ್ದಾರೆ’ ಎಂದು ಹೇಳಿದ್ದಾರೆ.
‘ಧರ್ಮಸ್ಥಳ ಎಂದರೆ ನಮ್ಮ ಮನೆಯವರಿಗೆಲ್ಲಾ ಬಹಳ ಪ್ರೀತಿ. ಅಲ್ಲಿ ಅತ್ಯಾಚಾರ, ಕೊಲೆಯಾದ ಶವಗಳನ್ನು ಹೂತಿರುವ ಬಗ್ಗೆ ಯಾವತ್ತೂ ನನಗೆ ಹೇಳಿಲ್ಲ. ಅಹಂಕಾರಿಯಾದ ಆತ ತನ್ನ ಅಣ್ಣ ತಮ್ಮಂದಿರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದ. ಅವನನ್ನು ಬಿಟ್ಟು ಬಂದದ್ದು ಒಳ್ಳೆಯದಾಯಿತು. ಆತ ಸತ್ತರೂ ನಾವು ಮುಖ ನೋಡಲು ಹೋಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.