ADVERTISEMENT

Na D'Souza: ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ನಾ. ಡಿಸೋಜ ಮಾತುಗಳು

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
   

2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ನಾ.ಡಿಸೋಜರ ನುಡಿಗಳಿವು.

  • ಹೆದ್ದಾರಿಯ ಮೇಲೆ ರಕ್ತದ ಕಲೆ ಬಿದ್ದಿರುವಾಗ ನಾನು ಕವಿತೆ ಹೇಗೆ ಬರೆಯಲಿ?’ ಕಪ್ಪು ಕವಿಯೊಬ್ಬ ಹೀಗೆ ಕೇಳಿದ್ದಾನೆ. ನನ್ನದೂ ಅದೇ ಮನಃಸ್ಥಿತಿ

  • ನಾಡಿನ ಯಾವುದೇ ಪ್ರದೇಶದ ಜನ, ನಮ್ಮನ್ನು ಯಾರೂ ಕೇಳುತ್ತಿಲ್ಲ, ಸಿಗಬೇಕಾದ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಕೊರಗುವಂತಹ ಸ್ಥಿತಿ ಬಾರದ ಹಾಗೆ ನೋಡಿಕೊಳ್ಳಬೇಕಿದೆ

    ADVERTISEMENT
  • ಪರಿಸರವನ್ನು ಬೇಕಾಬಿಟ್ಟಿಯಾಗಿ ನಾಶ ಮಾಡಿದ್ದರಿಂದಲೇ ಕಸ್ತೂರಿ ರಂಗನ್‌ ವರದಿ ಬರಲು ಕಾರಣ. ಪರಿಸರ ಇರುವುದೇ ನಮಗಾಗಿ ಎಂಬ ಭ್ರಮೆಯಲ್ಲಿ ಅದನ್ನು ದೋಚಿದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂತಾಗುತ್ತದೆ

  • ರೈತನನ್ನು ತಾನು ಬೆಳೆಯುತ್ತಿದ್ದ ಭೂಮಿಯ ಮೇಲಿನ ಕಾರ್ಖಾನೆಯ ಕಾವಲುಗಾರನನ್ನಾಗಿ ನಿಲ್ಲಿಸುವುದು ಇಂದಿನ ದುಃಸ್ಥಿತಿಯ ರೂಪಕದಂತಿದೆ

l→ನಮ್ಮ ದೇಶದಲ್ಲಿ ಹುಟ್ಟುವ ಮಕ್ಕಳೆಲ್ಲ ಕೈ ಮುಷ್ಟಿಯನ್ನು ಬಿಗಿಯಾಗಿ­ಟ್ಟು­ಕೊಂಡೇ ಇರುತ್ತಿದ್ದವು. ಈಗ ಕೈಚಾಚಿಕೊಂಡೇ ಹುಟ್ಟುತ್ತಿವೆ. ತಾ ತಾ ತಾ ಎಂಬುದು ನಮ್ಮ ಜನರ ಮನೋಧರ್ಮ­ವಾಗುತ್ತಿದೆ. ಇದಕ್ಕೆ ‘ಭಾಗ್ಯ’ ಎಂದು ಹೆಸರಿಟ್ಟಿದ್ದೇವೆ. ಸೈಕಲ್‌ ಭಾಗ್ಯ, ಅನ್ನ ಭಾಗ್ಯ, ಶಾದಿ ಭಾಗ್ಯ, ಪುಸ್ತಕ ಭಾಗ್ಯ... ಇಲ್ಲಿ ನಮ್ಮ ಆತ್ಮಾಭಿಮಾನದ ಕೊರತೆ ಇದೆ

l→ಯಂತ್ರವು ಮನುಷ್ಯನ ವಿವೇಕವನ್ನು ನಾಶಗೊಳಿಸಿ, ಆಮೇಲೆ ಹೃದಯದ ಮೇಲೆ ದಾಳಿ ಇಡುತ್ತದೆ. ಇದಕ್ಕೇ ಗಾಂಧೀಜಿ ಯಂತ್ರವನ್ನು ರಕ್ಕಸ ಎಂದು ಕರೆದಿದ್ದರು. ಮಾಹಿತಿ ತಂತ್ರಜ್ಞಾನದ ಈ ದಿನಗಳು ಜ್ಞಾನದ ದಾರಿಗಳನ್ನು ತೆರೆದಿಟ್ಟಿವೆಯೇ ಹೊರತು ವಿವೇಚನೆ ಮಾಡುವ ಶಕ್ತಿಯನ್ನಲ್ಲ. ನದಿಯೊಂದರ ಕುರಿತ ಅಂಕಿಅಂಶಗಳನ್ನು ಅರಿಯುವ ನಾವು ಅದರ ಮಾನವೀಯ ಸಂಬಂಧಗಳ ಬಗೆಗೆ, ಅದರಿಂದ ಕಲಿ­ಯುವ ಪಾಠಗಳ ಬಗೆಗೆ ಕುರುಡಾಗುತ್ತೇವೆ

l→ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ವಿಧಾನಸೌಧಕ್ಕೆ ಬಂದ. ಆತ ಅಲ್ಲಿ ಕುಳಿತು ತಮಿಳಿನಲ್ಲಿ ಮಾತನಾಡಿದ. ನಮ್ಮ ಮುಖ್ಯಮಂತ್ರಿ ಆತನಿಗೆ ಇಂಗ್ಲಿಷ್‌ನಲ್ಲಿ ಉತ್ತರ ನೀಡಿದರು. ಇದು ಸರ್ಕಾರದ ಲಕ್ಷಣ ಖಂಡಿತ ಅಲ್ಲ. ‘ನರಕಕ್ಕೆ ಇಳಿಸಿ ನಾಲಿಗೆ ಸೀಳ್ಸಿ ಬಾಯಿ ಹೊಲೆಸಾಕಿದ್ರೂನೆ ಮೂಗ್ನಲ್‌ ಕನ್ನಡ ಪದ ವಾಡ್ತೀನಿ’ ಅನ್ನುವ ನಮ್ಮ ಕವಿಗಳ ಶಪಥಕ್ಕೆ ಮಂತ್ರಿಗಳು ಎಂತಹ ಅವಮಾನ ಮಾಡುತ್ತಾರಲ್ಲ. ಇದು ಚಿಂತಿಸಬೇಕಾದ ವಿಷಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.