ADVERTISEMENT

ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ಡಿಕೆಶಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 11:00 IST
Last Updated 27 ಅಕ್ಟೋಬರ್ 2019, 11:00 IST
   

ತಿಪಟೂರು (ತುಮಕೂರು): ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರೊಂದಿಗೆ ಭಾನುವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಡಿಕೆಶಿ ಅವರ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.

ಮಠದಿಂದ ಹೊರಡುವಾಗ ಡಿಕೆಶಿ ಅವರು ಆನೆಗೆ ನಮಿಸಿದರು.

ADVERTISEMENT

ತುರುವೇಕೆರೆ ಮೂಲಕ ಮಠಕ್ಕೆ ಹೋಗುವಾಗ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಅವರಿಗೆ ಸನ್ಮಾನ ಮಾಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಠದ ಆವರಣಕ್ಕೆ ಶಾಸಕರು ಬಂದಾಗ, ಸೇರಿದ್ದ ಕಾರ್ಯಕರ್ತರು ಜೈಕಾರಗಳನ್ನು ಹಾಕಿ, ಪಟಾಕಿಗಳನ್ನು ಸಿಡಿಸಿ ಸ್ವಾಗತಿಸಿದರು.

ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಡಿ.ಕೆ ಶಿವಕುಮಾರ್‌ ಅವರು ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದಾರೆ. ಇ.ಡಿ ವಿಚಾರಣೆಗೆ ಕರೆದಾಗಲೂ ಡಿಕೆಶಿ ಮಠಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.