ಹಾಸನ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರದಲ್ಲಿ ನಾವು ಗಣತಿ ಮಾಡುತ್ತಿದ್ದೇವೆ. ಪಾಪ ಅವರಿನ್ನು ಹೊಸದಾಗಿ ಸಂಸದರಾಗಿದ್ದಾರೆ. ಅವರು ಇನ್ನೂ ಅನುಭವ ಪಡೆದುಕೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಯೋಗ್ಯತೆ ಇಲ್ಲ ಎಂಬ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಹಿಂದೆ ಕೂಡ ಗಣತಿ ಮಾಡಲಾಗಿದೆ. ಕೆಲವು ಸಂಘ ಸಂಸ್ಥೆಗಳು, ಸಮಾಜಗಳು ಹೇಳಿದ್ದರಿಂದ ಮತ್ತೆ ಅವಕಾಶ ಮಾಡಿಕೊಟ್ಟಿದ್ದೇವೆ. ಪಾಪ ಅವರಿಗಿನ್ನೂ ಅನುಭವ ಇಲ್ಲ. ನಮ್ಮನ್ನು ನೋಡಿ ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗಿದೆ.
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲೂ ಅದನ್ನು ಹೇಳಿದ್ದೇವು. ರಾಹುಲ್‌ಗಾಂಧಿ ಇಡೀ ದೇಶದಲ್ಲಿ ಮುಂದಾಳತ್ವ ತಗೆದುಕೊಂಡಿದ್ದಾರೆ. ತೆಲಂಗಾಣದಲ್ಲಿ ಈಗಾಗಲೇ ಮಾಡಿದ್ದೇವೆ. ಕರ್ನಾಟಕದಲ್ಲೂ ಮಾಡಲಾಗಿತ್ತು. ಆದರೆ ಹತ್ತು ವರ್ಷ ಆಗಿದೆ, ಹೊಸದಾಗಿ ಮಾಡಬೇಕು ಎಂದು ನಾನೇ ಪಕ್ಷದ ಅಧ್ಯಕ್ಷನಾಗಿ, ಅನೇಕ ಸಚಿವರು ಸೇರಿ ಮುಖ್ಯಮಂತ್ರಿ ಮನವೊಲಿಸಿದೆವು. ನಮ್ಮ ಪಕ್ಷ ಕೂಡ ಆದೇಶ ಕೊಟ್ಟಿದೆ. ನಾವು ತೀರ್ಮಾನ ಮಾಡಿದ್ದೇವೆ ಎಂದು ವಿವರಿಸಿದರು.
ಮತಗಳ ಕಳ್ಳತನದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂಬ ಬಿಜೆಪಿಯವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಏನೇನು ಬೇಕು ಅದನ್ನು ದೆಹಲಿಯಲ್ಲಿ ಕೊಟ್ಟಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.