ADVERTISEMENT

ಡಿಕೆಶಿ ರೋಡ್ ಷೋ: 15 ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 6:49 IST
Last Updated 29 ಅಕ್ಟೋಬರ್ 2019, 6:49 IST
   

ಬೆಂಗಳೂರು: ದೆಹಲಿಯಿಂದ ನಗರಕ್ಕೆ ಬಂದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ರೋಡ್ ಷೋ ಸಂದರ್ಭದಲ್ಲಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ 15 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಶನಿವಾರ ಡಿಕೆಶಿ ಬರಮಾಡಿಕೊಳ್ಳೋದಕ್ಕೆ ಏರ್ ಪೋರ್ಟ್ ಗೆ ಬಂದಿದ್ದ ಬೆಂಬಲಿಗರು. ಅವರೆಲ್ಲರೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ನಿಂದಿಸಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಅವರ ಗನ್ ಮ್ಯಾನ್ ಭರಮಪ್ಪ ಸುನಾಗರ್ ದೂರು ನೀಡಿದ್ದಾರೆ‌.

ಡಿಕೆಶಿ ಹಾಗು ಕಾನ್ವೆ ಹೋಗಲು ಸಾಧ್ಯವಾಗದ ರೀತಿ ಏರ್ ಪೋರ್ಟ್ ಬಳಿ ಜಾಮ್ ಆಗಿತ್ತು . ಟೋಲ್ ಬಳಿ 15 ಮಂದಿ ಕಾಂಗ್ರೆಸ್ ಬಾವುಟ ಹಿಡಿದು ರಸ್ತೆಯಲ್ಲಿ ನಿಂತಿದ್ದರು. ರಸ್ತೆಯಿಂದ ಪಕ್ಕಕ್ಕೆ ಸರಿಯುವಂತೆ ಗನ್ ಮ್ಯಾನ್ ಸೂಚನೆ ನೀಡಿದ್ದರು. ಉದ್ರಿಕ್ತ ಗುಂಪು ಗನ್ ಮ್ಯಾನ್ ಮೇಲೆಯೇ ದಾಳಿ ಮಾಡಿ, ನಿಂದಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.