ADVERTISEMENT

ಸಿಎಂ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST

ಬಳ್ಳಾರಿ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರೈತರ ಬಗ್ಗೆ ಏನು ಮಾತಾಡಿದ್ದಾರೆಎಂಬುದುಗೊತ್ತಿಲ್ಲ’ ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅಚ್ಚರಿ ಮೂಡಿಸಿದರು.

ಜಿಲ್ಲಾ ಪಂಚಾಯ್ತಿಸಭಾಂಗಣದಲ್ಲಿ ಸೋಮವಾರತ್ರೈಮಾಸಿಕಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಟಿವಿ ಅಥವಾ ಯಾವ ದಿನಪತ್ರಿಕೆಯನ್ನೂ ಗಮನಿಸಿಲ್ಲ. ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿಮುಖ್ಯಮಂತ್ರಿಹೇಳಿಕೆ ಬಗ್ಗೆ ಮಾಹಿತಿ ಇಲ್ಲ’ ಎಂದರು.

ಜಿಲ್ಲೆಗೆ ಸಚಿವ ಸ್ಥಾನ ಕೊಡದಿದ್ದರೆ ಹೇಗೆ?

ADVERTISEMENT

‘ಸಚಿವ ಸಂಪುಟದ ವಿಸ್ತರಣೆ ವಿಚಾರವು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ಹೈಕಮಾಂಡ್‌ಗೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆಯಾದರೆ,ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ದೊರೆಯಲಿದೆ. ಆರು ಮಂದಿ ಶಾಸಕರನ್ನು ಆರಿಸಿ ಕಳುಹಿಸಿಕೊಟ್ಟ ಜಿಲ್ಲೆಗೆಒಂದುಸಚಿವ ಸ್ಥಾನ ಕೊಡದಿದ್ದರೆ ಹೇಗೆ?’ ಎಂದರು.

ಸಭೆಗೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ್ಯಂಬಿಡೆಂಟ್ ಕಂಪನಿ ಯಾವುದು ಎಂಬುದು ನನಗೆ ಗೊತ್ತಿಲ್ಲ; ಏನೆಂದು ಪ್ರತಿಕ್ರಿಯಿಸಲಿ’ ಎಂದು ಮರುಪ್ರಶ್ನೆ ಹಾಕಿದರು.

‘ದುಃಖ, ದಾರಿದ್ರ್ಯ ದೂರ ಮಾಡುವ ಬಳ್ಳಾರಿಯ ಕನಕ ದುರ್ಗಮ್ಮ ದೇವಿಯ ಆಶೀರ್ವಾದ ನನಗಿದೆ. ಶುಭ ಮುಹೂರ್ತದಲ್ಲಿ ಕಾಲಿಟ್ಟೆ; ಗೆಲುವು ಸಿಕ್ಕಿತು. ಇಲ್ಲಿಗೆ ನಾನು ಐದು ತಿಂಗಳ ಚುನಾವಣೆಗಾಗಿ ಬಂದಿಲ್ಲ. ಐದು ವರ್ಷ ಐದು ತಿಂಗಳಿಗೆ ಮತ ಕೇಳಿದ್ದೇನೆ. ಹಾಗೆಯೇ ಮುಂದೆಯೂ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.