ADVERTISEMENT

‘ಅಡ್ಡಪಲ್ಲಕ್ಕಿ ಉತ್ಸವ ಬೇಕಿಲ್ಲ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:19 IST
Last Updated 16 ಮಾರ್ಚ್ 2019, 20:19 IST
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ   

ನ್ಯಾಮತಿ: ‘ಪ್ರಾಚೀನ ಕಾಲದಿಂದಲೂ ಪಂಚಪೀಠಗಳ ಜಗದ್ಗುರು ಪುರಪ್ರವೇಶ ಸಮಯದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಬೇಕೆಂಬ ಕಟ್ಟಳೆಯನ್ನು ತೆಗೆದುಹಾಕಲಾಗಿದೆ. ಅಡ್ಡಪಲ್ಲಕ್ಕಿ ಉತ್ಸವ ನಮಗೆ ಬೇಕಿಲ್ಲ. ಭಕ್ತರ ಅಪೇಕ್ಷೆಯಂತೆ ಅಡ್ಡಪಲ್ಲಕ್ಕಿ, ರಥ ಹಾಗೂ ಪಾದಯಾತ್ರೆ ಮಾಡಲು ಸಿದ್ಧ’ ಎಂದು ಉತ್ತರ ಪ್ರದೇಶದ ವಾರಾಣಸಿ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಮಾತನಾಡಿದರು.

‘ಅಡ್ಡಪಲ್ಲಕ್ಕಿ ಉತ್ಸವ ಸಂಬಂಧ ಭಕ್ತರಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ಭಕ್ತರನ್ನು ಮುಕ್ತ ಮಾಡಿದ್ದೇವೆ. ಪಂಚಪೀಠಾಧೀಶ್ವರರು ಒಂದೇ ವೇದಿಕೆಯಲ್ಲಿ ಬರಲು ಭಕ್ತರು ಗಟ್ಟಿ ನಿಲುವು ತಾಳಬೇಕು’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.