ADVERTISEMENT

ವೈರಸ್ ನಿರೋಧಕ ಮುಖಗವಸು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 17:00 IST
Last Updated 12 ಸೆಪ್ಟೆಂಬರ್ 2020, 17:00 IST
   

ಬೆಂಗಳೂರು: ಒಳ ಉಡುಪುಗಳನ್ನು ಸಿದ್ಧಪಡಿಸುವ ಖ್ಯಾತ ಬ್ರ್ಯಾಂಡ್‌ ‘ಡಾಲರ್’, ಈಗ ವೈರಸ್ ನಿರೋಧಕ ಮುಖಗವಸುಗಳನ್ನು (ಮಾಸ್ಕ್‌) ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ವೈರಸ್ ನಿರೋಧಕ ವಸ್ತ್ರಗಳನ್ನು ಸಿದ್ಧಪಡಿಸಲು ತಾನು ಆಸ್ಟ್ರೇಲಿಯಾ ಮೂಲದ ಹೆಲ್ತ್‌ಗಾರ್ಡ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಡಾಲರ್ ಕಂಪನಿ ತಿಳಿಸಿದೆ. ವೈರಸ್ ನಿರೋಧಕ ಮಾಸ್ಕ್‌ ಮಾತ್ರವಲ್ಲದೆ, ಒಳಉಡುಪುಗಳನ್ನೂ ಕಂಪನಿಯು ಮಾರುಕಟ್ಟೆಗೆ ತರಲು ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT