ADVERTISEMENT

ಕದ್ದ 24 ಕತ್ತೆಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 6:58 IST
Last Updated 23 ಆಗಸ್ಟ್ 2019, 6:58 IST
ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕತ್ತೆ ಕಳ್ಳತನ ಪ್ರಕರಣದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದರು
ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕತ್ತೆ ಕಳ್ಳತನ ಪ್ರಕರಣದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದರು   

ತೇರದಾಳ: ರಬಕವಿಯಲ್ಲಿ 24 ಕತ್ತೆಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ ಎಂದು ಬನಹಟ್ಟಿ ಸಿಪಿಐ ಅಶೋಕ ಸದಲಗಿ ಹೇಳಿದರು.

ಆನಂದ ಲಕ್ಷ್ಮಣ ಭಜಂತ್ರಿ, ಪರಶುರಾಮ ರಾಮು ಭಜಂತ್ರಿ, ಮುತ್ತಪ್ಪ ಸದಾಶಿವ ಹುದ್ದಾರ, ಪರಶುರಾಮ ಮಹಾದೇವ ಭಜಂತ್ರಿ, ಶ್ರೀಕಾಂತ ಮುರಿಗೆಪ್ಪ ಭಜಂತ್ರಿ, ಪ್ರಭು ಬಾಲಪ್ಪ ಭಜಂತ್ರಿ ಬಂಧಿತ ಆರೋಪಿಗಳು.

ಘಟನೆ ವಿವರ:ಆ. 19ರ ರಾತ್ರಿ ರಬಕವಿಯಲ್ಲಿ 24 ಕತ್ತೆಗಳು ಕಳುವಾಗಿದ್ದರ ಬಗ್ಗೆ ಶಾಮ ಮಾರುತಿ ಭಜಂತ್ರಿ ದೂರು ನೀಡಿದ್ದರು. ಇದರ ತನಿಖೆಯ ಜವಾಬ್ದಾರಿ ತೆಗೆದುಕೊಂಡ ತಂಡ ತನಿಖೆ ಆರಂಭಿಸಿ 24 ಕತ್ತೆಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಕತ್ತೆಗಳನ್ನು ಸಾಗಿಸಲು ಬಳಸಿದ ಅಶೋಕ ಲೈಲೆಂಡ್ ಕಂಪನಿಯ ಗೂಡ್ಸ್ ಹಾಗೂ 3 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸಿಲಾಗಿದ್ದು, ಆರೋಪಿ ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.