ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)
ಪ್ರಕ್ರಿಯೆಯನ್ನು ಖಂಡಿಸಿ, ರಂಗಕರ್ಮಿ ವಸಂತ ಬನ್ನಾಡಿ ಅವರು ನಾಟಕ ಅಕಾಡೆಮಿಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಬನ್ನಾಡಿ ಅವರಿಗೆ ಅಕಾಡೆಮಿಯು 2002ರಲ್ಲಿ ಪ್ರಶಸ್ತಿ ನೀಡಿತ್ತು. 17 ವರ್ಷಗಳ ಬಳಿಕ ಪ್ರಶಸ್ತಿ ಹಿಂದಿರುಗಿಸಲು ಮುಂದಾಗಿದ್ದಾರೆ.
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ. ಅಲ್ಲದೆ ನಗದು ಬಹುಮಾನವನ್ನೂ ಡಿ.ಡಿ ಮೂಲಕ ಹಿಂದಿರುಗಿಸುತ್ತೇನೆ’ ಎಂದು ಬನ್ನಾಡಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.