ADVERTISEMENT

‘ಸ್ಕೌಟ್‌–ಗೈಡ್ಸ್‌ 8 ಲಕ್ಷ ಸದಸ್ಯತ್ವ ಗುರಿ’

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:18 IST
Last Updated 8 ಮೇ 2019, 20:18 IST
.
.   

ದೊಡ್ಡಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯು 2018-19ನೇ ಸಾಲಿನಲ್ಲಿ 6.22 ಲಕ್ಷ ಸದಸ್ಯತ್ವ ಗುರಿ ತಲುಪಿ ದೇಶದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಈ ಸಾಲಿನಲ್ಲಿ 8 ಲಕ್ಷ ಸದಸ್ಯತ್ವ ತಲುಪುವ ಗುರಿ ಹೊಂದಲಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹೇಳಿದರು.

ನಗರದ ಅನಿಬೆಸೆಂಟ್ ಪಾಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರ ತರಬೇತಿ ಶಿಬಿರದ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2019-20ನೇ ಸಾಲಿನ ವಿವಿಧ ಕಾರ್ಯ ಚಟುವಟಿಕೆಗಳ ವಾರ್ಷಿಕ ಯೋಜನೆ ಸಿದ್ಧಪಡಿಸಲು ಮೇ 15 ರಂದು 3 ದಿನಗಳ ಕಾಲ ರಾಜ್ಯ ಮಟ್ಟದ ಯೋಜನಾ ಸಭೆ ಕರೆಯಲಾಗಿದೆ ಎಂದರು.

ADVERTISEMENT

ರಾಜ್ಯದ 85 ಮಂದಿ ಆಯ್ಕೆ: ರೇಂಜರ್ಸ್‍ಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಆದೇಶದಂತೆ ರಾಜ್ಯದ 17 ವಿಶ್ವವಿದ್ಯಾನಿಲಯಗಳಲ್ಲಿ ಸಂಯೋಜಕರನ್ನು ನೇಮಕ ಮಾಡಲಾಗಿದೆ. ಜುಲೈ 22 ರಿಂದ ಆಗಸ್ಟ್‌ 22 ರಿಂದ ಅಮೆರಿಕದ ವರ್ಜಿನಿಯದಲ್ಲಿ ನಡೆಯಲಿರುವ ವಿಶ್ವ ಯುವಕರ ಮೇಳಕ್ಕೆ ರಾಜ್ಯದ 85 ಮಂದಿ ಆಯ್ಕೆಯಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಘಟಕರಾಗಿ 25 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.