ADVERTISEMENT

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ನೆರವು ನಿಧಿ

'ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ' ಶೈಕ್ಷಣಿಕ ನೆರವು ನಿಧಿ, ಬಡ ವಿದ್ಯಾರ್ಥಿಗಳಿಗೆ ಉದಾರ ಕೊಡುಗೆ ನೀಡಿ...

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 5:05 IST
Last Updated 16 ಜೂನ್ 2025, 5:05 IST
   

ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಿರುವ ಬಡ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಆರ್ಥಿಕ ನೆರವು ನೀಡಲಿವೆ. ಇದಕ್ಕಾಗಿ ದಾನಿಗಳು ಆನ್‌ಲೈನ್‌ ಮೂಲಕ ಹಣವನ್ನು Deccan Herald-Prajavani relief Trustಗೆ ಕಳುಹಿಸಬಹುದು. ದಾನಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್/ಪ್ಯಾನ್ ಕಾರ್ಡ್‌ ಪ್ರತಿಯನ್ನು dept.finc@printersmysore.co.inಗೆ ಮೇಲ್‌ ಕಳುಹಿಸಿ.

₹5,000ಕ್ಕಿಂತ ಹೆಚ್ಚು ಹಣ ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಸೆಕ್ಷನ್ 80 ಜಿ ಅನ್ವಯ ಆದಾಯ ತೆರಿಗೆ ವಿನಾಯಿತಿ ಇದೆ.

ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಜೊತೆಗೆ ಆಧಾರ್‌, ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ವಿಳಾಸ ಮತ್ತು ಐಎಸ್‌ಎಫ್‌ಸಿ ಕೋಡ್‌ ಇರುವ ಬ್ಯಾಂಕ್‌ ಪಾಸ್‌ಬುಕ್‌ ಪುಟದ ಪ್ರತಿ ಅಥವಾ ಚೆಕ್‌ ಹಾಳೆಯ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಲಕೋಟೆಯ ಮೇಲೆ ಶೈಕ್ಷಣಿಕ ನೆರವಿಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು.

ADVERTISEMENT

ಯಾವ ಕಾರಣಕ್ಕೆ ತಮಗೆ ಶೈಕ್ಷಣಿಕ ನಿಧಿಯ ಅವಶ್ಯಕತೆಯಿದೆ ಎಂದು ವಿದ್ಯಾರ್ಥಿಯು ವಿವರವನ್ನು ಸ್ವಬರಹದಲ್ಲಿ ನೀಡಬೇಕು.

ವಿಳಾಸ; ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್– ಪ್ರಜಾವಾಣಿ ಪರಿಹಾರ ಟ್ರಸ್ಟ್.ನಂ.75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು–560001

ಆನ್‌ಲೈನ್‌ನಲ್ಲಿ ಹಣ ಸಂದಾಯ ಮಾಡುವವರು ಕೆಳಗಿನ ಚಿತ್ರದಲ್ಲಿರುವ QR ಕೋಡ್‌ ಸ್ಕ್ಯಾನ್ ಮಾಡಿ ಅಥವಾ ಈ ಲಿಂಕ್ ಬಳಸಿ.https://bit.ly/3xFpoz4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.