ADVERTISEMENT

ಆರ್ಯವೈಶ್ಯ ನಿಗಮದಿಂದ ಶೈಕ್ಷಣಿಕ ‌ಹಾಗೂ ಉದ್ಯೋಗ ಸಾಲ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 7:32 IST
Last Updated 8 ಜುಲೈ 2020, 7:32 IST
ಆರ್ಯವೈಶ್ಯ ನಿಗಮದಿಂದ ಉದ್ಯೋಗ ಹಾಗೂ ಶೈಕ್ಷಣಿಕ ಸಾಲ
ಆರ್ಯವೈಶ್ಯ ನಿಗಮದಿಂದ ಉದ್ಯೋಗ ಹಾಗೂ ಶೈಕ್ಷಣಿಕ ಸಾಲ   

ಕಲಬುರ್ಗಿ: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ‌ನಿಗಮದಿಂದ ಒಟ್ಟು 1650 ಜನರಿಗೆ ತಲಾ ₹ 1 ಲಕ್ಷ ಸಾಲ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ನಿಗಮಕ್ಕೆ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ಅವರು ₹ 10 ಕೋಟಿ ಅನುದಾನ ಬಿಡುಗಡೆ ‌ಮಾಡಿದ್ದಾರೆ. ಈ ಬಾರಿ ಹೆಚ್ಚುವರಿಯಾಗಿ ‌₹ 10 ಕೋಟಿ ಬರಬೇಕಿತ್ತು. ಆದರೆ‌ ಕೊರೊನಾ ಸಂಕಷ್ಟದಿಂದಾಗಿ ಬರಲಿಲ್ಲ. ಇನ್ನಷ್ಟು ಅನುದಾನ ಸಿಕ್ಕರೆ ಸಾಲದ ಮೊತ್ತವನ್ನು ‌ಹೆಚ್ಚಿಸಲಾಗುವುದು.

ಅರಿವು ಶೈಕ್ಷಣಿಕ ‌ಸಾಲ ಹಾಗೂ ನೇರ ಉದ್ಯೋಗ ಸಾಲವನ್ನು ನಿಗಮದಿಂದ ನೀಡಲಾಗುತ್ತಿದೆ. ಸರಿಯಾಗಿ ‌ಸಾಲ ಮರುಪಾವತಿ ಮಾಡಿದರೆ ಶೇ 20ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.

ADVERTISEMENT

ಶೈಕ್ಷಣಿಕ ‌ಸಾಲಕ್ಕೆ ಶೇ 2 ಹಾಗೂ ‌ನೇರ ಉದ್ಯೋಗ ‌ಸಾಲಕ್ಕೆ ಕೇವಲ 4ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ಅರುಣ್ ಹೇಳಿದರು.

ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ನಾರಾಯಣ ‌ನೆರ್ಲೆ, ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.