ADVERTISEMENT

ಸಿಇಟಿ, ನೀಟ್‌: ಇಂದಿನಿಂದ ಪ್ರವೇಶ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 19:30 IST
Last Updated 17 ಆಗಸ್ಟ್ 2023, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ  ವೃತ್ತಿಪರ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರವೇಶ ಪ್ರಕ್ರಿಯೆ ಆ.18ರಿಂದ ಆರಂಭವಾಗಲಿದೆ.

ಮಧ್ಯಾಹ್ನ 1ರ ನಂತರ ಅಭ್ಯರ್ಥಿಗಳು ಕಾಲೇಜುಗಳನ್ನು ಮಾಡಿಕೊಳ್ಳಬಹುದು.‌ ಈ ಪ್ರಕ್ರಿಯೆಗೆ ಆಗಸ್ಟ್ 20ರಂದು ಮಧ್ಯರಾತ್ರಿ 11.59ರವರೆಗೆ ಇರುತ್ತದೆ. ಆ.19ರಿಂದ 22ರವರೆಗೆ ಆನ್‌ಲೈನ್‌ ಶುಲ್ಕ ಪಾವತಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ‌ಎಸ್.ರಮ್ಯಾ‌ ಹೇಳಿದ್ದಾರೆ.

ಆಯ್ಕೆ-1 ನಮೂದಿಸಿರುವವರು ಶುಲ್ಕ ಪಾವತಿ ಮಾಡಿ, ನಂತರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಯ್ಕೆಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆಯಲು ಆ. 23 ಕೊನೆಯ ದಿನ. ಒಂದು ವೇಳೆ ಸಿಕ್ಕಿರುವ ಕಾಲೇಜು ಇಷ್ಟವಿಲ್ಲದೆ, ಇನ್ನೂ ಉತ್ತಮ ಕಾಲೇಜು ಬಯಸುವವರು ಆಯ್ಕೆ-2 ನಮೂದಿಸಿ, ಶುಲ್ಕ ಪಾವತಿ ಮಾಡಬೇಕು. ಇಂಥವರು ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ನೋಡಿಕೊಂಡು ಇಚ್ಛೆ ಪ್ರಕಾರ ಪ್ರವೇಶ ಪಡೆಯಬಹುದು. 

ADVERTISEMENT

ಎರಡೇ ಸುತ್ತು: ವೈದ್ಯಕೀಯ ‌ಮತ್ತು ದಂತ ವೈದ್ಯಕೀಯದ ಎರಡನೇ ಸುತ್ತಿನ ಸೀಟು ‌ಹಂಚಿಕೆಯ ನಂತರ ಅಭ್ಯರ್ಥಿಗಳ ಆಯ್ಕೆಗೆ ಮತ್ತೆ ಅವಕಾಶಗಳು ಇರುವುದಿಲ್ಲ. ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವವರು ಎಚ್ಚರಿಕೆಯಿಂದ ‘ಆಪ್ಷನ್ ಎಂಟ್ರಿ’  ಮಾಡಬೇಕು ಎಂದು ಪ್ರಾಧಿಕಾರ ತಿಳಿಸಿದೆ.

917 ವೈದ್ಯಕೀಯ ಸೀಟು ಉಳಿಕೆ: ಬೆಂಗಳೂರು: ಮೊದಲ ಸುತ್ತಿನ ಸೀಟು ಹಂಚಿಕೆ ನಂತರ 917 ವೈದ್ಯಕೀಯ ಸೀಟು ಉಳಿದಿವೆ. ಅವುಗಳಲ್ಲಿ 706 ಎನ್‌ಆರ್‌ಐ ಕೋಟಾದ ಸೀಟುಗಳು. 206 ಅಂಗವಿಕಲರ ಕೋಟಾದ ಸೀಟುಗಳು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.