ADVERTISEMENT

ಒಕ್ಕಲಿಗರ ಸಂಘದ ಚುನಾವಣೆ: ಶೇ 71ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:33 IST
Last Updated 13 ಡಿಸೆಂಬರ್ 2021, 6:33 IST

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 71ರಷ್ಟು ಮತದಾನ ಆಗಿದೆ.

ಮೂರು ವರ್ಷಗಳಿಂದ ಅಧ್ಯಕ್ಷರಿಲ್ಲದೆಯೇ ಆಡಳಿತಾಧಿಕಾರಿ ನೇತೃತ್ವದಲ್ಲಿ ಮುಂದುವರೆದಿದ್ದ ಸಂಘಕ್ಕೆ ಇದೀಗ ಹೈಕೋರ್ಟ್ ಆದೇಶದ ಮೇರೆಗೆ ಚುನಾವಣೆ ನಡೆದಿದೆ. ರಾಜ್ಯದಾದ್ಯಂತ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ, ಸಂಜೆ 5ರವರೆಗೆ ನಡೆಯಿತು.

ರಾಜ್ಯದಾದ್ಯಂತ ಒಟ್ಟು 221 ಅಭ್ಯರ್ಥಿಗಳು ಕಣದಲ್ಲಿದ್ದು, 1,049 ಮತ ಕೇಂದ್ರಗಳಲ್ಲಿ ಮತದಾನ ನಡೆಯಿತು. ಸಂಘದಲ್ಲಿ ಒಟ್ಟು 5,20,721 ಲಕ್ಷ ಮತದಾರರಿದ್ದು, 3,67,971 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ADVERTISEMENT

ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯನ್ನು ಒಳಗೊಂಡ ಜಿಲ್ಲಾ ಕ್ಷೇತ್ರದಲ್ಲಿ ಶೇ 71, ಮೈಸೂರು–ಶೇ 70, ಮಂಡ್ಯ – ಶೇ 56, ಹಾಸನ –ಶೇ 83, ತುಮಕೂರು– ಶೇ 78 , ಚಿತ್ರದುರ್ಗ– ಶೇ 84, ಕೋಲಾರ ಮತ್ತು ಚಿಕ್ಕಬಳ್ಳಾಪುರ ಶೇ –74, ದಕ್ಷಿಣ ಕನ್ನಡ ಮತ್ತು ಉಡುಪಿ – ಶೇ 83, ಕೊಡಗು ಶೇ – 82, ಶಿವಮೊಗ್ಗ ಮತ್ತು ಉತ್ತರ ಕನ್ನಡ ಶೇ 84, ಚಿಕ್ಕಮಗಳೂರು ಶೇ 69ರಷ್ಟು ಮತದಾನ ಆಗಿದೆ.

ಕಾರ್ಯಕಾರಿ ಸಮಿತಿಯ ಸ್ಥಾನಗಳನ್ನು ಗೆಲ್ಲಲು ಸಮುದಾಯ ಪ್ರಮುಖರು ‘ಸಿಂಡಿಕೇಟ್‌’ ಮಾಡಿಕೊಂಡು ಕಣಕ್ಕಿಳಿದಿದ್ದು, ‌ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇದೇ 15ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.