ADVERTISEMENT

ರಾಮನಗರ ತಾಲ್ಲೂಕಿನ ಮೊಟ್ಟೆದೊಡ್ಡಿ ಗ್ರಾಮದಲ್ಲಿನ ಮತಗಟ್ಟೆಗೆ ನುಗ್ಗಿದ ಹಾವು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 4:43 IST
Last Updated 3 ನವೆಂಬರ್ 2018, 4:43 IST
ಮತಗಟ್ಟೆಗೆ ನುಗ್ಗಿದ್ದ ಹಾವನ್ನು ಸ್ಥಳೀಯರು ಹೊರ ಹಾಕಿದರು.
ಮತಗಟ್ಟೆಗೆ ನುಗ್ಗಿದ್ದ ಹಾವನ್ನು ಸ್ಥಳೀಯರು ಹೊರ ಹಾಕಿದರು.   

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪ‌ ಚುನಾವಣೆಯ ಮತದಾನ ಪ್ರಕ್ರಿಯೆಯು ಶನಿವಾರ ಬೆಳಿಗ್ಗೆ 7ರಿಂದ ಆರಂಭಗೊಂಡಿದೆ. ಮತದಾರರು ಕ್ರಮೇಣ ಮತಗಟ್ಟೆಗಳತ್ತ ಹೆಜ್ಜೆ ಇಡುತ್ತಿದ್ದಾರೆ.

ರಾಮನಗರ ತಾಲ್ಲೂಕಿನ ಮೊಟ್ಟೆದೊಡ್ಡಿ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಮುಂಜಾನೆ ಮತದಾನ ಆರಂಭಕ್ಕೂ ಮುನ್ನ ಕೊಳಕು ಮಂಡಲ‌ ಹಾವು ಒಳನುಗ್ಗಿ ಆತಂಕ ಸೃಷ್ಟಿಸಿತ್ತು. ಗ್ರಾಮಸ್ಥರು ಹಾವು ಹಿಡಿದು ಹೊರಗೆ ಬಿಟ್ಟ ಬಳಿಕ ಮತದಾನ ಆರಂಭವಾಯಿತು.

ಕ್ಷೇತ್ರದಲ್ಲಿ ಒಟ್ಟು 2.06 ಲಕ್ಷ ಮತದಾರರು ಇದ್ದಾರೆ. 277 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1520 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.