ಸಕಲೇಶಪುರ: ತಾಲ್ಲೂಕಿನ ಯಸಳೂರು ವಲಯ ಅರಣ್ಯ ವ್ಯಾಪ್ತಿಯ ದೊಡ್ಡಕಲ್ಲೂರು ಗ್ರಾಮದಲ್ಲಿ ಗುರುವಾರ ಮತ್ತೊಂದು ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
ಸುಮಾರು 40 ವರ್ಷದ ಆನೆ ಇದಾಗಿದ್ದು, ಶಿವಮೊಗ್ಗ ಸಕ್ರೆಬೈಲು ಅರಣ್ಯಧಾಮಕ್ಕೆ ಸಾಗಿಸಲಾಯಿತು.
ನಿರಂತರ ಕಾಡಾನೆ ದಾಳಿಯಿಂದ ಪ್ರಾಣ, ಬೆಳೆ ಹಾನಿ ಉಂಟಾಗುತ್ತಿರುವ ಕಾರಣ ಐದು ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಹಾಗೂ ಎರಡು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ಸರ್ಕಾರ ಆದೇಶ ನೀಡಿತ್ತು.
ಈಗಾಗಲೇ ಒಂದು ಆನೆ ಹಿಡಿದು, ಎರಡು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ಡಿಎಫ್‌ಓ ಶಿವರಾಂ ಬಾಬು, ಎಸಿಎಫ್ ಲಿಂಗರಾಜು, ಯಸಳೂರು ಆರ್‌ಎಫ್‌ಓ ಅಭಿಷೇಕ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.