ಹೊಸದುರ್ಗ: ತಾಲ್ಲೂಕಿನ ಗಿರಿಯಾಪುರದ ಕೆರೆಯ ಸಮೀಪ ಮಂಗಳವಾರ ತಡರಾತ್ರಿ ಕಾಡಾನೆ ಅಡಿಗೆ ಸಿಲುಕಿ ಮೂವರು ಗಾಯಗೊಂಡಿದ್ದಾರೆ.
ತಾಲ್ಲೂಕಿನ ಕಸಪ್ಪನಹಳ್ಳಿಯ ಕೋಡಿಕರಿಯಪ್ಪ, ಮಂಜುನಾಥ್, ಶ್ರೀನಿವಾಸ್ ಕೆರೆ ಗುತ್ತಿಗೆ ತೆಗೆದುಕೊಂಡಿದ್ದರಿಂದ ಕೆರೆ ಕಾಯಲು ಮಲಗಿದ್ದರು. ಈ ಮಾರ್ಗವಾಗಿ ಸಾಗಿದ ಕಾಡಾನೆ ಈ ಮೂವರು ಮಲಗಿದ್ದ ಸ್ಥಳದಿಂದ ಸಾಗಿದೆ. ಕಾವಲುಗಾರರು ಮಲಗಿದ್ದ ಜಾಗದಲ್ಲಿ ಅಡ್ಡಲಾಗಿ ಬೈಕ್ ನಿಲ್ಲಿಸಿದ್ದರಿಂದ ನಿಯಂತ್ರಣ ತಪ್ಪಿದ ಆನೆಯು ಮಲಗಿದವರ ಮೇಲೆಯೇ ಬಿದ್ದಿದೆ. ಈ ಘಟನೆಯಿಂದ ಕೋಡಿಕರಿಯಪ್ಪ ಅವರ ತಲೆ ಹಾಗೂ ಕಾಲಿಗೆ, ಮಂಜುನಾಥ್ ಅವರ ಕೈಗೆ ಗಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.