ADVERTISEMENT

ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಿ: ರಾಜ್ಯ ವಕೀಲರ ಪರಿಷತ್ತು

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 21:40 IST
Last Updated 3 ಜುಲೈ 2021, 21:40 IST
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಬಿ.ವಿ. ಶ್ರೀನಿವಾಸ್, ಆರ್.ರಾಜಣ್ಣ, ಅಧ್ಯಕ್ಷ ಎಲ್. ಶ್ರಿನಿವಾಸ ಬಾಬು, ವ್ಯವಸ್ಥಾಪಕ ಅರುಣ್ ಪೂಜಾರ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಬಿ.ವಿ. ಶ್ರೀನಿವಾಸ್, ಆರ್.ರಾಜಣ್ಣ, ಅಧ್ಯಕ್ಷ ಎಲ್. ಶ್ರಿನಿವಾಸ ಬಾಬು, ವ್ಯವಸ್ಥಾಪಕ ಅರುಣ್ ಪೂಜಾರ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದರು   

ಬೆಂಗಳೂರು: ಸುಪ್ರೀಂ ಕೋರ್ಟ್‌ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸುವಂತೆ ಕೋರಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯಪಾಲ ವಜುಭಾಯಿ ವಾಲಾ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

‘ಸಂವಿಧಾನದ ಕಲಂ 32ರ ಪ್ರಕಾರ ನ್ಯಾಯ ಪಡೆಯುವುದು ಪ್ರತಿ ಪ್ರಜೆಯ ಮೂಲಭೂತ ಹಕ್ಕು. ಭಾಷೆ, ಪ್ರಾಂತ್ಯಗಳಿದ್ದುಕೊಂಡೇ ಭೌಗೋಳಿಕವಾಗಿ ವಿಸ್ತಾರವಾದ ವ್ಯಾಪ್ತಿ ಹೊಂದಿರುವ ದೇಶ ಭಾರತ. ಸುಪ್ರೀಂ ಕೋರ್ಟ್‌ ದೆಹಲಿಯಲ್ಲಿ ಇರುವುದರಿಂದ ಪೂರ್ವ, ಪಶ್ಚಿಮ, ದಕ್ಷಿಣ ಭಾಗದ ಕಕ್ಷಿದಾರರಿಗೆ‌ ಹಾಗೂ ವಕೀಲರಿಗೆ ಆರ್ಥಿಕವಾಗಿ ಸಮಸ್ಯೆ ಆಗುತ್ತಿದೆ.’

‘ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳಲ್ಲಿ ಶೇ 40ರಷ್ಟು ದಕ್ಷಿಣ ಭಾರತಕ್ಕೆ ಸಂಬಂಧಿಸಿದವೇ ಆಗಿವೆ. ಶೇ 26ರಷ್ಟು ಪ್ರಕರಣಗಳು ಕರ್ನಾಟಕದವು. ಬೆಂಗಳೂರಿನಲ್ಲಿ ಪೀಠ ಸ್ಥಾಪಿಸಿದರೆ ಕೇರಳ, ತಮಿಳುನಾಡು ಮತ್ತು ಪುದುಚೇರಿಗಳ ಕಕ್ಷಿದಾರರಿಗೂ ಅನುಕೂಲ ಆಗಲಿದೆ’ ಎಂದು ಪರಿಷತ್ತು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಲು 18ನೇ ಕಾನೂನು ಆಯೋಗವೂ ಶಿಫಾರಸು ಮಾಡಿದೆ. 40 ವರ್ಷಗಳಿಂದ ಈ ಕುರಿತು ಪ್ರಯತ್ನ ನಡೆಯುತ್ತಿದೆ. ಈಗಲಾದರೂ ಪೀಠ ಆರಂಭಿಸಬೇಕು’ ಎಂದು ವಕೀಲರ ಪರಿಷತ್ತಿನ ಅಧ್ಯಕ್ಷ ಎಲ್. ಶ್ರಿನಿವಾಸ ಬಾಬು ನೇತೃತ್ವದ ನಿಯೋಗ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.