ADVERTISEMENT

ಮಾಜಿ ಶಾಸಕ ಅರಕೇರಿ ನಿಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 18:12 IST
Last Updated 23 ಏಪ್ರಿಲ್ 2019, 18:12 IST
ಎಸ್‌.ಎಸ್‌.ಅರಕೇರಿ
ಎಸ್‌.ಎಸ್‌.ಅರಕೇರಿ   

ಬೆಂಗಳೂರು: ಹೋರಾಟಗಾರ ಹಾಗೂ ಮಾಜಿ ಶಾಸಕ ಸಿದ್ಧಾರ್ಥ ಸಂಗಪ್ಪ ಅರಕೇರಿ (81) ಅವರು ರಾಜಾಜಿನಗರದಲ್ಲಿರುವ ಮನೆ
ಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು.

ವಿಜಯಪುರ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ‘ರಿಪಬ್ಲಿಕ್ ಪಾರ್ಟಿ ಆಫ್‌ ಇಂಡಿಯಾ’ ಅಭ್ಯರ್ಥಿಯಾಗಿ ಹಾಗೂ 1979ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು.

ವಿಜಯಪುರ ಜಿಲ್ಲೆಯ ಅರಕೇರಿ ಗ್ರಾಮದವರಾಗಿದ್ದ ಅವರು, ಕಾನೂನು ಪದವೀಧರರಾಗಿದ್ದರು. 2000ರಲ್ಲಿ ‘ದಿ ಬೆಸ್ಟ್ ಸಿಟಿಜನ್ಸ್ ಆಫ್ ಇಂಡಿಯಾ ಅವಾರ್ಡ್’, 2014ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌, 2015ರಲ್ಲಿ ಅಂಬೇಡ್ಕರ್ ಪ್ರಶಸ್ತಿ ಹಾಗೂ 2016ರಲ್ಲಿ ‘ಬಸವ ಶ್ರೀ’ ಪ್ರಶಸ್ತಿ ಲಭಿಸಿತ್ತು. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ADVERTISEMENT

ಬುಧವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.