ADVERTISEMENT

210 ತಾಲ್ಲೂಕುಗಳಿಗೂ ಭೂ ಸುರಕ್ಷೆ ಯೋಜನೆ ವಿಸ್ತರಣೆ: ಸಚಿವ ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 14:01 IST
Last Updated 18 ಡಿಸೆಂಬರ್ 2024, 14:01 IST
<div class="paragraphs"><p>ಸಚಿವ ಕೃಷ್ಣಬೈರೇಗೌಡ</p></div>

ಸಚಿವ ಕೃಷ್ಣಬೈರೇಗೌಡ

   

ಸುವರ್ಣ ವಿಧಾನಸೌಧ (ಬೆಳಗಾವಿ): ‘ಸರ್ವೇ ಹಾಗೂ ಕಂದಾಯ ಇಲಾಖೆಗಳಲ್ಲಿನ ಹಳೆ ಭೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಡಾಟಾಬೇಸ್‌ನಲ್ಲಿ ಸಂರಕ್ಷಿಸುವ ಉದ್ದೇಶದಿಂದ 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕ ಜಾರಿಗೊಳಿಸಿದ್ದ ‘ಭೂ ಸುರಕ್ಷೆ’ ಯೋಜನೆಯನ್ನು ಉಳಿದ 210 ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೂಲ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 31 ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದೆ. 2025ರ ಡಿಸೆಂಬರ್ ಒಳಗಾಗಿ ಉಳಿದ ತಾಲೂಕುಗಳಲ್ಲಿನ ದಾಖಲೆಗಳು ಸ್ಕ್ಯಾನಿಂಗ್ ಆಗಲಿವೆ. ಜನರಿಗೆ ಆನ್‌ಲೈನ್‌ನಲ್ಲಿಯೂ ಲಭ್ಯವಾಗಿದೆ’ ಎಂದರು.

ADVERTISEMENT

‘ಅಲ್ಲದೆ, ಪ್ರಮುಖ ದಾಖಲೆಗಳ ಮೂಲಪ್ರತಿಯನ್ನು ತಾಲ್ಲೂಕು ಮಟ್ಟದಲ್ಲಿ ವೈಜ್ಞಾನಿಕವಾಗಿ ಸಂರಕ್ಷಿಸಿಡುವ ದೃಷ್ಟಿಯಿಂದ ತಾಲ್ಲೂಕಿಗೊಂದು ಕಾಂಪ್ಯಾಕ್ಟರ್ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಪೋಡಿ ಅರ್ಜಿ ಇತ್ಯರ್ಥ: ‘ರಾಜ್ಯದ್ಯಂತ ಮೂರು ವರ್ಷಗಳಲ್ಲಿ ಪೋಡಿಗಾಗಿ ಸಲ್ಲಿಸಿದ 6,62,825 ಅರ್ಜಿಗಳಲ್ಲಿ 5,33,545 ಅರ್ಜಿಗಳನ್ನು ವಿಲೇಗೊಳಿಸಲಾಗಿದೆ. ಬಾಕಿ ಇರುವ 1,29,280 ಅರ್ಜಿಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.