ADVERTISEMENT

ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ; ವಿಡಿಯೊ ಹಂಚಿಕೊಂಡ ದತ್ತು ಪುತ್ರ ಉಮೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2023, 6:15 IST
Last Updated 5 ಅಕ್ಟೋಬರ್ 2023, 6:15 IST
<div class="paragraphs"><p>ಸಾಲು ಮರದ&nbsp;ತಿಮ್ಮಕ್ಕ</p></div>

ಸಾಲು ಮರದ ತಿಮ್ಮಕ್ಕ

   

ಬೆಂಗಳೂರು: ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ವೃಕ್ಷ ಮಾತೆ, ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸಂಬಂಧ ಅವರ ದತ್ತು ಪುತ್ರ ಉಮೇಶ್ ವಿಡಿಯೊ ಹಂಚಿಕೊಂಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ADVERTISEMENT

ಮೂರು ತಿಂಗಳ ಹಿಂದೆ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ನಂತರ ಬೇಲೂರು ಸಮೀಪದ ಬಳ್ಳೂರಿನಲ್ಲಿರುವ ಉಮೇಶ್ ಅವರ ಮನೆಗೆ ತೆರಳಿದ್ದರು.

‌ಸೆಪ್ಟೆಂಬರ್‌ 26ರಂದು ಅವರ ಉಸಿರಾಟದಲ್ಲಿ ಏರುಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ರಾತ್ರಿಯಿಂದ ಉಸಿರಾಟದಲ್ಲಿ ತೀವ್ರ ಏರು ಪೇರಾಗಿದ್ದರಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.