ADVERTISEMENT

ಸಾಲಮನ್ನಾ: ಗುಟ್ಟಾಗಿಯೇ ಉಳಿದ ಲೆಕ್ಕ

ಹಣ ಹೊಂದಿಸಲು ಆರ್ಥಿಕ ಇಲಾಖೆ ಕಸರತ್ತು ಆರಂಭ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 19:30 IST
Last Updated 13 ಜುಲೈ 2018, 19:30 IST
   

ಬೆಂಗಳೂರು: ರೈತರ ₹ 2 ಲಕ್ಷವರೆಗಿನ ಬೆಳೆಸಾಲ ಹಾಗೂ ₹ 1 ಲಕ್ಷವರೆಗಿನ ಚಾಲ್ತಿ ಸಾಲ ಮನ್ನಾ ಮಾಡುವುದಾಗಿ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಸಾಕಷ್ಟು ಯೋಚಿಸಿಯೇ ಈ ತೀರ್ಮಾನಕ್ಕೆ ಬಂದಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟಿಸಿದ ಬಳಿಕವೂ ಈ ಕುರಿತ ಗೊಂದಲಗಳು ಮುಂದುವರಿದಿವೆ.

ಸಹಕಾರಿ ಬ್ಯಾಂಕ್‌ ಹಾಗೂ ರಾಷ್ಟ್ರಿಕೃತ ಬ್ಯಾಂಕ್‌ಗಳಲ್ಲಿ ₹ 1 ಲಕ್ಷದವರೆಗಿನ ಚಾಲ್ತಿ ಸಾಲ ಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆಯನ್ನು ಹೊಂದಿಸುವ ಸಲುವಾಗಿ ಹಣಕಾಸು ಇಲಾಖೆಯ ಅಧಿಕಾರಿಗಳು ಕಸರತ್ತು ಮಾಡುತ್ತಿದ್ದಾರೆ.

‘ಸಾಲಮನ್ನಾದ ನಿಖರ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಈ ಕುರಿತ ಖರ್ಚು ವೆಚ್ಚಗಳನ್ನು ಹೊಂದಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನವಾರದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು’ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಸಾಲ ಮನ್ನಾ ಮಾಡಲಾಗುತ್ತಿದೆ. ಸರ್ಕಾರ ₹ 2 ಲಕ್ಷದವರೆಗಿನ ಸಾಲ ಮನ್ನಾ ಪ್ರಕಟಿಸಿದ್ದು, ಅದರ ಮೊತ್ತವನ್ನು ಹಂತ ಹಂತವಾಗಿ ಬ್ಯಾಂಕ್‌ಗಳಿಗೆ ಪಾವತಿಸುವುದಾಗಿ ಹೇಳಿದೆ. ನಾವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾನದಂಡಗಳನ್ನು ಚಾಚೂತಪ್ಪದೇ ಪಾಲಿಸಬೇಕಾಗುತ್ತದೆ. ಹಾಗಾಗಿ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಒಪ್ಪಿಗೆ ನೀಡಿದರೆ ರಾಜ್ಯ ಸರ್ಕಾರದ ಸಾಲಮನ್ನಾ ಸೂತ್ರವನ್ನು ಒಪ್ಪಿಕೊಳ್ಳುವುದಕ್ಕೆ ನಮ್ಮ ಅಭ್ಯಂತರ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ರೈತರ ಸಾಲ ಮನ್ನಾದ ಹಾದಿ....

₹ 8,164 ಕೋಟಿ

ಸಿದ್ದರಾಮಯ್ಯ ಮಾಡಿದ್ದ ಸಾಲಮನ್ನಾ ಮೊತ್ತ

₹ 50 ಸಾವಿರವರೆಗಿನ ಬೆಳೆಸಾಲ (ಸಹಕಾರಿ ಬ್ಯಾಂಕ್‌ಗಳಲ್ಲಿನ) ಮನ್ನಾ

15,58,228 ಸಾವಿರ ರೈತರಿಗೆ ಪ್ರಯೋಜನ

***

₹34,000 ಕೋಟಿ

ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದು (ಇದೇ ಜುಲೈ 5ರಂದು)

₹ 2 ಲಕ್ಷದವರೆಗೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆಸಾಲದ ಸುಸ್ತಿ ಮೊತ್ತ ಮನ್ನಾ

₹ 25ಸಾವಿರ ಪ್ರೋತ್ಸಾಹಧನ (ಸಕಾಲದಲ್ಲಿ ಸಾಲ ಮರುಪಾವತಿಸಿದ ರೈತರಿಗೆ)


ಯಾರಿಗೆಲ್ಲ ಪ್ರಯೋಜನ?

4,19,557 ರೈತರು ₹50ಸಾವಿರದಿಂದ– ₹1ಲಕ್ಷವರೆಗೆ ಸಾಲ ಹೊಂದಿದ್ದರು (ಸಹಕಾರಿ ಬ್ಯಾಂಕ್‌ಗಳಲ್ಲಿ)

₹2,966.24 ಕೋಟಿ ಸಾಲದ ಮೊತ್ತ

₹2092.82 ಕೋಟಿ ಹಿಂದೆಯೇ ಬಿಡುಗಡೆ ಆಗಿದೆ

₹ 868.42 ಕೋಟಿ ಬಾಕಿ ಇದೆ.

***

1,57,247 ರೈತರು ₹1ಲಕ್ಷದಿಂದ ₹2 ಲಕ್ಷದವರೆಗೆ ಸಾಲ ಹೊಂದಿದ್ದರು

₹ 2,231 ಕೋಟಿ ಸಾಲದ ಮೊತ್ತ

₹ 784 ಕೋಟಿಹಿಂದೆಯೇ ಬಿಡುಗಡೆ ಆಗಿದೆ

₹ 1,445 ಕೋಟಿ ಬಾಕಿ ಇದೆ

***

64,991 ರೈತರು ₹ 2 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದಿದ್ದರು

₹ 324.95 ಕೋಟಿ ಸಾಲ ಮನ್ನಾ ಆಗಿತ್ತು

₹3,765 ಕೋಟಿ ಬಾಕಿ ಇದೆ

***

₹10,700 ಕೋಟಿ

ಇದೇ ಜುಲೈ 13ರಂದು ಮುಖ್ಯಮಂತ್ರಿ ಘೋಷಣೆ

22.23 ಲಕ್ಷ

ಒಟ್ಟು ಪ್ರಯೋಜನ ಪಡೆಯುವ ರೈತರು

₹25 ಸಾವಿರದವರೆಗೆ ಚಾಲ್ತಿ ಸಾಲ ಮನ್ನಾ

5,04,537

ಪ್ರಯೋಜನ ಪಡೆಯುವ ರೈತರು

₹ 5 ಸಾವಿರ ಕೋಟಿ ಪ್ರೋತ್ಸಾಹಧನದಿಂದ ಆಗುವ ಹೊರೆ

***

₹25ಸಾವಿರದಿಂದ – ₹ 50ಸಾವಿರದವರೆಗೆ ಚಾಲ್ತಿ ಸಾಲ ಮನ್ನಾ

9,29,916 ರೈತರಿಗೆ ಪ್ರಯೋಜನ

₹ 7985 ಕೋಟಿ ಮನ್ನಾ ಆಗತ್ತೆ

***


₹ 50ಸಾವಿರದಿಂದ 1 ಲಕ್ಷ ಮನ್ನಾ

4,20,974 ರೈತರಿಗೆ ಪ್ರಯೋಜನ

₹8,492 ಕೋಟಿ ಮನ್ನಾ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.