ADVERTISEMENT

ರೈತ ಮಹಿಳೆಯರಿಗೆ ಕಾಯಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 19:58 IST
Last Updated 23 ಡಿಸೆಂಬರ್ 2019, 19:58 IST
   

ಭಾರತೀನಗರ (ಮಂಡ್ಯ ಜಿಲ್ಲೆ): ವಿವಿಧ ಜಿಲ್ಲೆಗಳಿಂದ ಆಯ್ಕೆ ಮಾಡಲಾದ 101ರೈತಮಹಿಳೆಯರಿಗೆಸೋಮವಾರ ‘ಕಾಯಕಪ್ರಶಸ್ತಿ’ ಪ್ರದಾನ ಮಾಡಲಾಯಿತು.

ರಾಜ್ಯದ 27 ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಿಂದ ಭಾರತಿ ಕಾಲೇಜಿನವರೆಗೆ ರೈತರ ಮೆರವಣಿಗೆ ನಡೆಯಿತು.

ಸಮಾವೇಶದ ಅಂಗವಾಗಿರೈತನಾಯಕರಾದ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ, ಎನ್‌.ಡಿ.ಸುಂದರೇಶ್‌ ಅವರನ್ನು ಸ್ಮರಿಸಲಾಯಿತು.

ADVERTISEMENT

‘ಭಾರತದ ಕಬ್ಬು ಬೆಳೆಗಾರರ ವಿರೋಧಿಯಾಗಿರುವ ಬ್ರೆಜಿಲ್‌ ಪ್ರಧಾನಿ ಬೋಲ್ಸೆನಾರೊ ಅವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಕೇಂದ್ರ ಸರ್ಕಾರದ
ಕ್ರಮ ಖಂಡನೀಯ’ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.