ADVERTISEMENT

ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್‌ ಸೌಲಭ್ಯ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 20:57 IST
Last Updated 27 ಜನವರಿ 2026, 20:57 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಬೆಂಗಳೂರು: ಜನಪ್ರತಿನಿಧಿಗಳಿಗೆ ಟೋಲ್‌ಗಳಲ್ಲಿ ತೊಂದರೆ ಆಗದಿರುವಂತೆ ಫಾಸ್ಟ್ಯಾಗ್‌ ವ್ಯವಸ್ಥೆ ಮಾಡಿ, ಅದಕ್ಕೆ ಸರ್ಕಾರದಿಂದ ಸಹಕಾರ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ತಿಳಿಸಿದರು.

ಕಾಂಗ್ರೆಸ್‌ನ ಎಸ್‌.ಎನ್‌.ಸುಬ್ಬಾರೆಡ್ಡಿ, ಬಿಜೆಪಿಯ ಉಮಾನಾಥ್‌ ಕೋಟ್ಯಾನ್ ಮತ್ತು ಇತರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ADVERTISEMENT

ಮೈಸೂರು– ಬೆಂಗಳೂರು ರಸ್ತೆಯ ಟೋಲ್‌ ಬಳಿ ಜನಪ್ರತಿನಿಧಿಗಳಿಗೆ ಕಿರಿ ಕಿರಿ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಹುನಗುಂದದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರಿಗೆ ತೊಂದರೆ ಮಾಡಿದ ಕಾರಣಕ್ಕೆ ನೋಟಿಸ್‌ ನೀಡಿ ₹10 ಲಕ್ಷ ದಂಡ ವಿಧಿಸಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

‘ಸಭಾಧ್ಯಕ್ಷರ ಕಡೆಯಿಂದ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರಿಗೆ ಪಾಸ್ ಹಾಗೂ ಫಾಸ್ಟ್ಯಾಗ್‌ ಅನ್ನು ಒದಗಿಸಬೇಕು’ ಎಂದು ಹೇಳಿದರು.

‘ನಮ್ಮ ವಾಹನದ ಮೇಲೆ ‘ಶಾಸಕರು’ ಎಂದು ಬೋರ್ಡ್‌ ಬರೆಸಿದ್ದರೂ ನಿಲ್ಲಿಸಿ, ಐಡಿ ಕಾರ್ಡ್‌ ತೋರಿಸಿ,
ಮುಖ ತೋರಿಸಿ ಎಂದೆಲ್ಲ ಹೇಳುತ್ತಾರೆ’ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.