ADVERTISEMENT

ವಿಶ್ವ ಅಪ್ಪಂದಿರ ದಿನ: ‘ಅಕ್ಷತೆ ಹಾಕಲು ಅಪ್ಪನಿಲ್ಲ’

ಮನೋಹರ್ ಎಂ.
Published 19 ಜೂನ್ 2021, 23:31 IST
Last Updated 19 ಜೂನ್ 2021, 23:31 IST
ತಂದೆ ಮಂಜುನಾಥ್ ಜೊತೆಗೆ ಪುತ್ರಿಯರಾದ ಶಿವಾಲಿ ಹಾಗೂ ಸೋನಾಲಿ.
ತಂದೆ ಮಂಜುನಾಥ್ ಜೊತೆಗೆ ಪುತ್ರಿಯರಾದ ಶಿವಾಲಿ ಹಾಗೂ ಸೋನಾಲಿ.   

ಬೆಂಗಳೂರು: ‘ಮಗಳ ಮದುವೆ ಮಾಡುವುದು ಪ್ರತಿ ಅಪ್ಪನ ಕನಸು. ಅದರಂತೆ ನನ್ನ ಮದುವೆಯ ಸಿದ್ಧತೆಗಳೂ ಅಂತಿಮ ಹಂತ ತಲುಪಿದ್ದವು.ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಪ್ಪ(ಮಂಜುನಾಥ್) ನನ್ನ ಮದುವೆಯಲ್ಲಿ ಅಕ್ಷತೆ ಕಾಳು ಹಾಕಬೇಕಿತ್ತು.ಅದು, ನನಸಾಗುವ ಹೊತ್ತಿನಲ್ಲೇ ಕೋವಿಡ್‌ ಅವರನ್ನು ನಮ್ಮಿಂದಬರಸಿಡಿಲಿನಂತೆ ದೂರ ಮಾಡಿತು’.

‘ಮೌನದಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಪ್ಪ, ಅವರ ಇಚ್ಛೆಯಂತೆ ಜವಾಬ್ದಾರಿಯುತ ವರನೊಂದಿಗೆ ಮದುವೆ ನಿಶ್ಚಿಯಿಸಿದ್ದರು. ಆದರೆ, ಮದುವೆ ಸಂಭ್ರಮದ ಕ್ಷಣಗಳನ್ನು ಕಳೆಯಲು ಅವರು ಈಗ ನಮ್ಮೊಂದಿಗೆ ಇಲ್ಲ.’

‘ಕೆಲವರಿಗೆ ಅಪ್ಪ ಎಂದ ಕೂಡಲೇ ನೆನಪಾಗುವುದುಸಿಡುಕತನ ಹಾಗೂ ಗಂಭೀರ ಸ್ವಭಾವ. ಇದನ್ನು ಅವರು ಜೀವಿಸಿದ್ದ ಅವಧಿಯಲ್ಲಿ ನಾನು ಕಂಡವಳೇ ಅಲ್ಲ. ಇಬ್ಬರು ಹೆಣ್ಣುಮಕ್ಕಳನ್ನೂ ತನ್ನ ಕಣ್ಣುಗಳಂತೆ ಜೋಪಾನ ಮಾಡಿದ್ದರು’.

ADVERTISEMENT

‘ನಮಗಾಗಿ ಅವರು ಎಷ್ಟೋ ಬಾರಿ ನಿದ್ರೆಯನ್ನು ಮರೆತಿದ್ದರು. ನಮ್ಮ ಜೀವನಕ್ಕೆ ಬುನಾದಿಯಾಗಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಮಾರ್ಗದರ್ಶನ ನಮ್ಮ ಜೀವನದ ಒಂದು ಘಟ್ಟವನ್ನು ಸರಾಗವಾಗಿ ತಲುಪಿಸಿದೆ’.

‘ಭೌತಿಕವಾಗಿ ಅವರಿಲ್ಲದ ದಿನಗಳನ್ನು ಕಳೆಯುವುದು ಸವಾಲಾಗಿದೆ. ಆದರೆ, ಹೆಜ್ಜೆ ಮುಂದಕ್ಕೆ ಸಾಗಲೇಬೇಕು. ಅವರು ನಮ್ಮೊಂದಿಗೆ ಇದ್ದಾರೆ, ನಮ್ಮ ಜೊತೆಗೂಡುತ್ತಾರೆ ಎಂಬ ನಿರೀಕ್ಷಾ ಭಾವ, ಪ್ರತಿ ಹೆಜ್ಜೆಯಲ್ಲೂ ನಮಗೆ ಬಲ ನೀಡುತ್ತಿದೆ’.

‘ಅವರಿದ್ದಾಗ ನಡೆದ ತಂಗಿ ಶಿವಾಲಿಯ ರಂಗಪ್ರವೇಶದ ದಿನ ಎಂದಿಗೂ ಮಾಸುವುದಿಲ್ಲ. ಅಪ್ಪನನ್ನುಬಿಟ್ಟುಒಂದು ದಿನವೂ ಇರಲಾರದ ನಮ್ಮಿಂದ ಅವರು ಬಲುದೂರ ಸಾಗಿದ್ದಾರೆ. ಅವರಿಗೆ ಅಪ್ಪಂದಿರ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾರೆ. ಅವರ ಜೀವಂತಿಕೆಯಲ್ಲಿ ನಮ್ಮ ಪಾಲಿಗೆ ಪ್ರತಿದಿನವೂ ‘ಅಪ್ಪಂದಿರ ದಿನ’.

–ಸೋನಾಲಿ ಮಂಜುನಾಥ್, ರಾಜಾಜಿನಗರ, ಬೆಂಗಳೂರು

ನಿರೂಪಣೆ: ಮನೋಹರ್ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.