ADVERTISEMENT

‘ಡ್ರೋನ್‌ ಪೈಲಟ್‌ ತರಬೇತಿ: 3–4 ತಿಂಗಳಲ್ಲಿ ಶುಲ್ಕ ಇಳಿಕೆ’

ಪಿಟಿಐ
Published 17 ಮೇ 2022, 14:13 IST
Last Updated 17 ಮೇ 2022, 14:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಡ್ರೋನ್‌ ಪೈಲಟ್‌ ತರಬೇತಿ ಕೋರ್ಸ್‌ನ ಶುಲ್ಕ ಮುಂದಿನ 3–4 ತಿಂಗಳಲ್ಲಿ ಇಳಿಕೆಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ತಿಳಿಸಿದ್ದಾರೆ.

ವರ್ಚುವಲ್‌ ಆಗಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ರೈತರೊಬ್ಬರು ಈ ಕೋರ್ಸ್‌ನ ಹೆಚ್ಚುವರಿ ಶುಲ್ಕದ ಕುರಿತು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಧಿಯಾ ಅವರು, ತರಬೇತಿ ನೀಡುವ ಸಂಸ್ಥೆಗಳು ಹೆಚ್ಚಾದಂತೆ ಶುಲ್ಕ ಇಳಿಕೆಯಾಗಲಿದೆ ಎಂದಿದ್ದಾರೆ.

ಕಳೆದ ಐದು ತಿಂಗಳಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) 23 ಸಂಸ್ಥೆಗಳಿಗೆ ಡ್ರೋನ್‌ ಪೈಲಟ್‌ ತರಬೇತಿ ನೀಡಲು ಅನುಮತಿ ಕೊಟ್ಟಿದೆ ಎಂದೂ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.