ADVERTISEMENT

₹ 80,168 ಕೋಟಿ ಲೇಖಾನುದಾನಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 18:31 IST
Last Updated 14 ಫೆಬ್ರುವರಿ 2019, 18:31 IST

ಬೆಂಗಳೂರು: ಬಿಜೆಪಿ ಸದಸ್ಯರು ನಡೆಸಿದ ಧರಣಿ ಹಾಗೂ ಗದ್ದಲದ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಜೆಟ್‌ನ ಪಾರ್ಶ್ವಿಕ ಮೊತ್ತವಾದ ₹ 80,168 ಕೋಟಿ ಲೇಖಾನುದಾನಕ್ಕೆ ಗುರುವಾರ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆದರು.

2019-2020ನೇ ಸಾಲಿಗೆ ₹ 2.34 ಲಕ್ಷ ಕೋಟಿ ಗಾತ್ರದ ಬಜೆಟ್‌ಅನ್ನು ಅವರು ಕಳೆದ ಶುಕ್ರವಾರ ಮಂಡಿಸಿದ್ದರು. ಅದರ ಮೂರನೇ ಒಂದು ಭಾಗದಷ್ಟು ಹಣವನ್ನು ಹೊಸ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ವ್ಯಯಿಸಲು ಅವರೀಗ ಶಾಸನಸಭೆಯ ಅನುಮೋದನೆ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT