ADVERTISEMENT

ಸ್ಫೋಟಕ್ಕೆ 4 ದಿನ ಮೊದಲು ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 18:19 IST
Last Updated 23 ನವೆಂಬರ್ 2022, 18:19 IST
ಮೊಹಮ್ಮದ್ ಶಾರಿಕ್
ಮೊಹಮ್ಮದ್ ಶಾರಿಕ್   

ಶಿವಮೊಗ್ಗ: ಇಲ್ಲಿನ ಪುರಲೆ ಬಳಿ ತುಂಗಾ ನದಿ ದಡದಲ್ಲಿ ಪ್ರಾಯೋಗಿಕವಾಗಿ ನಡೆಸಿದ್ದ ಬಾಂಬ್ ಸ್ಫೋಟ ಹಾಗೂ ರಾಷ್ಟ್ರಧ್ವಜ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್ ಸೇರಿದಂತೆ ಮೂವರ (ಶಿವಮೊಗ್ಗದ ಸೈಯದ್ ಯಾಸಿನ್ ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮದ್) ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಎಫ್‌ಐಆರ್ ದಾಖಲಿಸಿದ ನಾಲ್ಕು ದಿನಗಳಲ್ಲಿ ಶಾರಿಕ್ ಸಾಗಿಸುತ್ತಿದ್ದ ಕುಕ್ಕರ್‌ ಬಾಂಬ್ ಸ್ಫೋಟಗೊಂಡಿದೆ.

ತಾವು ಸಿದ್ಧಪಡಿಸಿದ್ದ ಬಾಂಬ್‌ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರೋಪಿಗಳು ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ನಂತರ ರಾಷ್ಟ್ರಧ್ವಜ ಸುಟ್ಟು ಘಟನೆಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದರು. ಸೆಪ್ಟೆಂಬರ್ 20ರಂದು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಸೈಯದ್ ಯಾಸಿನ್ ಹಾಗೂ ಮಾಜ್ ಮುನೀರ್ ಅಹಮದ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿತ್ತು. ಅದೇ ವೇಳೆ ಶಾರಿಕ್ ನಾಪತ್ತೆಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT