ADVERTISEMENT

ಐವರು ಹಿರಿಯರಿಗೆ ‘ವಕೀಲ ಭೂಷಣ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 20:15 IST
Last Updated 13 ಡಿಸೆಂಬರ್ 2024, 20:15 IST
ಸಿ.ಎಂ.ನಾಗಭೂಷಣ
ಸಿ.ಎಂ.ನಾಗಭೂಷಣ   

ಬೆಂಗಳೂರು: ‘ವಕೀಲರ ವಾಹಿನಿ‘ ದ್ವಿಭಾಷಾ ಮಾಸ ಪತ್ರಿಕೆ ಕೊಡಮಾಡುವ 2024ನೇ ಸಾಲಿನ ‘ವಕೀಲ ಭೂಷಣ’ ಪ್ರಶಸ್ತಿಗೆ ಹೈಕೋರ್ಟ್‌ನ ಐವರು ಹಿರಿಯ ವಕೀಲರನ್ನು ಆಯ್ಕೆ ಮಾಡಲಾಗಿದೆ.

ಪ್ರಾಧ್ಯಾಪಕರೂ ಆದ ಹಿರಿಯ ವಕೀಲ ಸಿ.ಎಂ.ನಾಗಭೂಷಣ, ಕ್ರಿಮಿನಲ್‌ ವಕೀಲ ಸಿ.ಎಚ್‌.ಹನುಮಂತರಾಯ, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್‌.ಸುಬ್ಬಾರೆಡ್ಡಿ, ‘ಆಲ್‌ ಇಂಡಿಯಾ ಫೆಡರೇಶನ್‌ ಆಫ್‌ ವುಮೆನ್‌ ಲಾಯರ್ಸ್‌’ ಅಧ್ಯಕ್ಷೆ ಹೇಮಲತಾ ಮಹಿಷಿ, ಪದಾಂಕಿತ ಹಿರಿಯ ವಕೀಲರೂ ಆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಕಾಂತರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಮಾಜಿ ಅಡ್ವೊಕೇಟ್‌ ಜನರಲ್‌ ಹಾಗೂ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಈ ಆಯ್ಕೆ ಮಾಡಿದೆ’ ಎಂದು ‘ವಕೀಲರ ವಾಹಿನಿ’ ಸಂಪಾದಕ ಡಿ.ಎಂ.ಹೆಗಡೆ ತಿಳಿಸಿದ್ದಾರೆ.

ADVERTISEMENT

‘ವಕೀಲರ ದಿನಾಚರಣೆ’ ಹಿನ್ನೆಲೆಯಲ್ಲಿ ಇದೇ 18ರಂದು ಸಂಜೆ ನಗರದ ಕಬ್ಬನ್‌ ಪಾರ್ಕ್‌ನಲ್ಲಿರುವ ಎನ್‌ಜಿಒ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಮಾರಂಭದಲ್ಲಿ ‘ವಕೀಲರ ವಾಹಿನಿ’ ವಿಶೇಷ ಸಂಚಿಕೆಯನ್ನು ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಉದಯ ಹೊಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. 

ಸಿ.ಎಚ್‌.ಹನುಮಂತರಾಯ
ಕೆ.ಎನ್‌.ಸುಬ್ಬಾರೆಡ್ಡಿ
ಹೇಮಲತಾ ಮಹಿಷಿ
ಎಚ್‌.ಕಾಂತರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.