ADVERTISEMENT

ಪ್ರವಾಹ ಇಳಿಮುಖ; ಸೇತುವೆಗಳು ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 16:00 IST
Last Updated 19 ಆಗಸ್ಟ್ 2019, 16:00 IST

ಬೆಳಗಾವಿ: ಕೃಷ್ಣಾ ಹಾಗೂ ಉಪನದಿಗಳ ಪ್ರವಾಹ ಇಳಿಮುಖವಾಗಿದ್ದು, ಹಲವು ದಿನಗಳಿಂದ ಜಲಾವೃತಗೊಂಡಿದ್ದ ಕೆಲವು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಕಳೆದ 10 ದಿನಗಳಿಂದ ಜಲಾವೃತಗೊಂಡಿದ್ದ ಅಥಣಿ ತಾಲ್ಲೂಕಿನ ದರೂರು ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ರಸ್ತೆ ತುಂಬಾ ಹಾಳಾಗಿದ್ದರಿಂದ ಕೇವಲ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಬಸ್‌, ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಇನ್ನೂ ಅನುಮತಿ ದೊರೆತಿಲ್ಲ. ರಾಯಬಾಗ ತಾಲ್ಲೂಕಿನ ಕುಡಚಿ ಹಾಗೂ ಚಿಂಚಲಿ– ಹಾಲಹಳ್ಳಿ ಸೇತುವೆಗಳೂ ಮುಕ್ತವಾಗಿವೆ. ಲಘು ವಾಹನಗಳು ಮಾತ್ರ ಸಂಚರಿಸುತ್ತಿವೆ.

ವೇದ ಹಾಗೂ ದೂಧ್‌ಗಂಗಾ ನದಿಗೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ನಿರ್ಮಿಸಲಾಗಿರುವ ಸದಲಗಾ– ಬೋರಗಾಂವ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಯಕ್ಸಂಬಾ– ದಾನವಾಡ ಸೇತುವೆಯೂ ಮುಕ್ತವಾಗಿದೆ. ಗೋಕಾಕದ ಸಿಂಗಳಾಪುರದ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ಇನ್ನೂ ಮುಳುಗಡೆ ಸ್ಥಿತಿಯಲ್ಲಿದೆ. ಲೊಳಸೂರ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.