ಬೆಂಗಳೂರು: ‘ಮೇ ತಿಂಗಳ ಆಹಾರ ಧಾನ್ಯ ಪಡೆಯಲು ಪಡಿತರ ಚೀಟಿದಾರರ ಬಯೋ ಮೆಟ್ರಿಕ್ (ಬೆರಳಚ್ಚು) ಕಡ್ಡಾಯ ಅಲ್ಲ’ ಎಂದು ಆಹಾರ ಇಲಾಖೆ ತಿಳಿಸಿದೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿದಾರರ ಆರೋಗ್ಯ ಹಿತರಕ್ಷಣೆ ದೃಷ್ಟಿಯಿಂದ ಬಯೋಮೆಟ್ರಿಕ್ ಪಡೆಯದೆ ಆಹಾರಧಾನ್ಯ ವಿತರಿಸಲು ನ್ಯಾಯ ಬೆಲೆ ಅಂಗಡಿದಾರರಿಗೆ ಇಲಾಖೆ ಸೂಚನೆ ನೀಡಿದೆ.
‘ಪಡಿತರ ಚೀಟಿದಾರರ ಆಧಾರ್‌ಗೆ ಜೋಡಿಸಿಕೊಂಡಿರುವ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಪಡಿತರ ವಿತರಿಸಬಹುದು. ವಯೋವೃದ್ಧರು, ಅನಾರೋಗ್ಯಪೀಡಿತರು, ಅಂಗವಿಕಲರಿಗೆ ವಿನಾಯಿತಿ ಸೌಲಭ್ಯದಡಿ ಪಡಿತರ ವಿತರಿಸಲಾಗುವುದು. ಪಡಿತರ ಚೀಟಿದಾರರ ಪರಿಶೀಲನಾ ಪಟ್ಟಿ ಮೂಲಕವೂ ಧಾನ್ಯ ವಿತರಿಸಲಾಗುವುದು’ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.