ADVERTISEMENT

ಡೆಕ್ಕನ್ ಹೆರಾಲ್ಡ್‌ನ ಮಾಜಿ ಸಹ ಸಂಪಾದಕ ಎನ್.ಸಿ. ಗುಂಡೂರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 18:00 IST
Last Updated 26 ಜೂನ್ 2025, 18:00 IST
ಎನ್.ಸಿ. ಗುಂಡೂರಾವ್
ಎನ್.ಸಿ. ಗುಂಡೂರಾವ್   

ಬೆಂಗಳೂರು: ಡೆಕ್ಕನ್ ಹೆರಾಲ್ಡ್‌ನ ಮಾಜಿ ಸಹ ಸಂಪಾದಕ ಎನ್.ಸಿ. ಗುಂಡೂರಾವ್ (78) ಅವರು ಗುರುವಾರ ನಿಧನರಾದರು.

ಅವರಿಗೆ ಪತ್ನಿ ಉಷಾ, ಪುತ್ರಿಯರಾದ ಸಪ್ನಾ ಮತ್ತು ಸಹ್ಯಾದ್ರಿ ಇದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.

ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರೂಫ್ ರೀಡರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಗುಂಡೂರಾವ್ ಅವರು, ಸುಮಾರು 35 ವರ್ಷಗಳ ಸುದೀರ್ಘ ಅವಧಿಯಲ್ಲಿ ಅವರು ಮುಖ್ಯ ವರದಿಗಾರ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.

ADVERTISEMENT

ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು 15 ವಾರಗಳಿಗೊಮ್ಮೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಬರೆಯುತ್ತಿದ್ದ ಅಂಕಣದ ಮೂಲಕ ಅವರು ಗುರುತಿಸಿಕೊಂಡಿದ್ದರು. 1992ರಿಂದ 2005ರಲ್ಲಿ ನಿವೃತ್ತರಾಗುವವರೆಗೆ ಈ ಅಂಕಣ ಬರೆದಿದ್ದರು. ಕನ್ನಡ ಸಿನಿಮಾ ರಂಗದ ಕುರಿತು ಆಳವಾದ ಜ್ಞಾನ ಹೊಂದಿದ್ದ ಮತ್ತು ತಮ್ಮ ವೃತ್ತಿಜೀವನದ ಅವಧಿಯಲ್ಲಿ ನೂರಾರು ಸಿನಿಮಾಗಳನ್ನು ಕುರಿತು ವಿಮರ್ಶೆ ಬರೆದಿದ್ದರು.

ಬೆಂಗಳೂರಿನಲ್ಲಿ ಶುಕ್ರವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.