ADVERTISEMENT

ವಾರಾಹಿ ಜಲಾನಯನ ಪ್ರದೇಶದಲ್ಲಿ 4ನೇ ಬಾರಿ ಲಘು ಭೂಕಂಪನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 13:53 IST
Last Updated 28 ಫೆಬ್ರುವರಿ 2019, 13:53 IST

ಹೊಸನಗರ: ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ವಾರಾಹಿ ಜಲಾನಯನ ಪ್ರದೇಶದಲ್ಲಿ ಗುರುವಾರ ಸಂಜೆ 5.55ಕ್ಕೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಜಲಾನಯನ ಪ್ರದೇಶದ ಯಡೂರು, ಸುಳಗೋಡು, ಖೈರುಗುಂದಾ ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರಿ ಶಬ್ದದೊಂದಿಗೆ ಸುಮಾರು 2 ಸೆಕೆಂಡ್‌ಗಳ ಕಾಲ ಲಘು ಭೂಕಂಪನ ಆಗಿದೆ.

ಈ ವಾರದಲ್ಲಿ ಮೊದಲ ಬಾರಿಗೆ ಹಗಲು ಭೂಕಂಪನ ಆಗಿದ್ದು, ಮಹಿಳೆಯರು, ಮಕ್ಕಳು ಹೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ADVERTISEMENT

ವಾರಾಹಿ ಜಲಾನಯನ ಪ್ರದೇಶದ ಮಾಣಿ ಅಣೆಕಟ್ಟು ಸುತ್ತಲಿನ ಹಿನ್ನೀರಿನ ಗ್ರಾಮಗಳಲ್ಲಿ ಒಂದು ತಿಂಗಳಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿದ್ಯುತ್ ನಿಗಮ ಗಮನ ಹರಿಸುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ ಮಂಜುನಾಥ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.