ADVERTISEMENT

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಾಸ್‌ ನೀಡಲಿ: ಸಭಾಪತಿ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 7:54 IST
Last Updated 26 ಜುಲೈ 2018, 7:54 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹಾವೇರಿ: ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಬೇಕು. ಏಕೆಂದರೆ, ಬಡ ಕುಟುಂಬದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಾರೆ’ ಎಂದುವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

‘ಶ್ರೀಮಂತರ ಮಕ್ಕಳು ಇಂಗ್ಲಿಷ್ ಮೀಡಿಯಂ ನಲ್ಲಿ ಕಲಿಯುತ್ತಿದ್ದಾರೆ. ಪಾಸ್‌ ವಿತರಣೆಯ ಕುರಿತು ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ’ ಎಂದರು.

‘ಪ್ರತ್ಯೇಕಉತ್ತರ ಕರ್ನಾಟಕ ರಾಜ್ಯದ ಕೂಗು ಅಸಂಭದ್ಧ’ ಎಂದು ಸುದ್ದಿಗಾರರೊಂದಿಗೆ ಇಲ್ಲಿ ಗುರುವಾರ ಮಾತನಾಡಿದ ಅವರು, ಈ ಕುರಿತು ‘ಆಭಾಗದ ಶಾಸಕರು, ಸಚಿವರ ಜೊತೆ ಸಭೆ ಸೇರಿ ಚರ್ಚಿಸುತ್ತೇನೆ. ಆ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲೇ ಸಭೆ ಮಾಡಿ ಆಭಾಗದ ಬೇಡಿಕೆಗಳ ಬಗ್ಗೆ ಚರ್ಚಿಸುತ್ತೇವೆ. ಅಲ್ಲದೇ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು’ ಎಂದರು.

ADVERTISEMENT

‘ಸರ್ಕಾರಿ ಶಾಲೆ ಅಕ್ಕಪಕ್ಕದಲ್ಲೇ ಖಾಸಗಿ ಶಾಲೆ ತೆರೆಯಲು ಅವಕಾಶ ನೀಡಿರುವುದು ತಪ್ಪು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ವಿಧಾನ ಸಭೆಯ ಮಾಜಿ ವಿಧಾನ ಸಭಾಧ್ಯಕ್ಷ ಕೆ. ಬಿ. ಕೋಳಿವಾಡ ಅವರು ಸರ್ಕಾರಿ ಪೀಠೋಪಕರಣ ಮನೆಗೆ ಒಯ್ದಿರುವುದು ತಪ್ಪು. ಕಾನೂನು ಪ್ರಕಾರ ಹಣ ಪಾವತಿ ಮಾಡಿ ಕೊಂಡೊಯ್ದಿದ್ದರೆ ತಪ್ಪಾಗುತ್ತಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.