ADVERTISEMENT

ಭಾನುವಾರ ಸಂಜೆ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿಯ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 9:10 IST
Last Updated 20 ಅಕ್ಟೋಬರ್ 2018, 9:10 IST
   

ಗದಗ:ಭಾನುವಾರ ಸಂಜೆಸಂಜೆ 4 ಗಂಟೆಗೆ ಮಠದ ಆವರಣದಲ್ಲಿಯೇತ್ರಿವಿಧ ದಾಸೋಹಿ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿಯ ಅಂತ್ಯಕ್ರಿಯೆ ನಡೆಯಲಿದೆ.

ಭಾನುವಾರ ಗದಗನಗರದಲ್ಲಿ ಮೆರವಣಿಗೆ ನಡೆಸಲಾಗುವುದು. ನಂತರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

ತ್ರಿವಿಧ ದಾಸೋಹಿ:ತೋಂಟದಾರ್ಯ ಮಠವು ಕ್ರಿ.ಶ 15ನೇ ಶತಮಾನದ ಶಿವಯೋಗಿ ಎಡೆಯೂರು ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ನೇರ ವಾರಸುದಾರಿಕೆಯ ಮಠ. ಸಿದ್ಧಲಿಂಗ ಶ್ರೀಗಳು ಪೀಠಾಧಿಪತಿಗಳಾದ ನಂತರವು ಈ ಪರಂಪರೆ ಹೀಗೆಯೇ ಮುಂದುವರಿದುಕೊಂಡು ಬಂದಿತ್ತು.

ADVERTISEMENT

ಸಿದ್ಧಲಿಂಗ ಸ್ವಾಮೀಜಿ ಅವರು, ತ್ರಿವಿದ ದಾಸೋಹಿ ಎಂದೇ ಹೆಸರಾಗಿದ್ದರು. ಮಠದಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ, ಪುಸ್ತಕ ದಾಸೋಹ, ಸಂಸ್ಕೃತಿ ದಾಸೋಹ ಪರಂಪರೆಯನ್ನು ಹುಟ್ಟುಹಾಕಿದ್ದರು. ಭಕ್ತರನ್ನು ಮತೀಯ ಚೌಕಟ್ಟಿನಿಂದ ಬಿಡಿಸಿ, ಮಾನವೀಯತೆಯ ವಿಸ್ತಾರಕ್ಕೆ ಅಣಿಗೊಳಿಸಿದ್ದರಿಂದ ಮಠವು ಸರ್ವಮತ ಬಾಂಧವರ ಪ್ರೀತಿಯ ಪೀಠವಾಗಿತ್ತು. ಇದಕ್ಕಾಗಿಯೇ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಂದ ‘ರಾಷ್ಟ್ರೀಯ ಕೋಮು ಸೌಹಾರ್ದತಾ ಪ್ರಶಸ್ತಿ’ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.