ADVERTISEMENT

ಗಾಂಧಿ ಕುರಿತ ಸಂದೇಹ: ನಾಗರಿಕರಿಂದ ಪ್ರಶ್ನೆಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 17:30 IST
Last Updated 18 ಜನವರಿ 2022, 17:30 IST

ಬೆಂಗಳೂರು: ಗಾಂಧೀಜಿ ಕುರಿತ ಸಂದೇಹಗಳಿಗೆ ಸಮರ್ಪಕ ವಿವರಣೆಯನ್ನೊಳಗೊಂಡ ಕೃತಿ ಪ್ರಕಟಿಸಲು ಗಾಂಧಿ ವಿಚಾರ ವೇದಿಕೆ ನಿರ್ಧರಿಸಿದೆ. ಇದಕ್ಕಾಗಿ ಗಾಂಧಿ ಬಗೆಗಿನ ಎಲ್ಲಾ ರೀತಿಯ ಪ್ರಶ್ನೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.

‘ಮಹಾತ್ಮಾ ಗಾಂಧಿಯವರ ಮೇಲಿನ ಹಲವು ಸಂದೇಹಗಳು, ತಾತ್ವಿಕ ವಿರೋಧಗಳು, ಚಾರಿತ್ರ್ಯ ಹನನದ ಸುಳ್ಳುಗಳು ಸಮಾಜದಲ್ಲಿ ಸ್ಥಾ‍ಪಿತವಾಗಿವೆ. ಸಾರ್ವಜನಿಕರು ತಮ್ಮ ಮನದಲ್ಲಿ ಮೂಡುವ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕಳುಹಿಸಬಹುದು. ರಾಜ್ಯದ ಇತಿಹಾಸ ತಜ್ಞರು, ರಾಜ್ಯಶಾಸ್ತ್ರಜ್ಞರು, ಧಾರ್ಮಿಕ ವಿದ್ವಾಂಸರನ್ನು ಸಂಪರ್ಕಿಸಿ ಅವರಿಂದ ಪ್ರಶ್ನೆಗಳಿಗೆ ಉತ್ತರ ಪಡೆದು ಅವುಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

‘ಅಧಿಕೃತ ದಾಖಲೆಗಳ ಆಧಾರದಲ್ಲೇ ರಚಿತವಾಗಲಿರುವ ಈ ಕೃತಿಯು ಇಂಗ್ಲಿಷ್‌ಗೂ ಅನುವಾದಗೊಳ್ಳಲು ಅರ್ಹವಾಗುವಂತಿದೆ. ಹೀಗಾಗಿ ಕೃತಿಯ ನಿರ್ವಹಣೆಗೆ ಸಂಪಾದಕ ಮಂಡಳಿ ರಚಿಸಲಾಗಿದೆ. ಬರಹಗಾರ ಎಂ.ಜಿ.ಹೆಗಡೆ ಅವರು ಪ್ರಧಾನ ಸಂಪಾದಕರಾಗಿರಲಿದ್ದಾರೆ. ಸಾಹಿತಿ ಬೋಳುವಾರು ಮಹಮ್ಮದ್‌ಕುಂಞಿ, ಲೇಖಕನಾರಾಯಣ ಯಾಜಿ, ಕವಿ ಸುಬ್ರಾಯ ಚೊಕ್ಕಾಡಿ,ಪ್ರೊ.ಚಂದ್ರಶೇಖರ ವಸ್ತ್ರದ,ಪ್ರೊ.ಭುವನೇಶ್ವರಿ ಹೆಗಡೆ,ಕವಯತ್ರಿಸುಚಿತ್ರಾ ಹೆಗಡೆ ಸೇರಿ 19 ಮಂದಿ ಸಂಪಾದಕ ಮಂಡಳಿಯಲ್ಲಿ ಇರಲಿದ್ದಾರೆ’ ಎಂದು ವಿವರಿಸಿದೆ.

ADVERTISEMENT

‘ಒಬ್ಬರು ಎಷ್ಟು ಪ್ರಶ್ನೆಗಳನ್ನಾದರೂ ಕಳುಹಿಸಬಹುದು. ಆದರೆ ಲೇಖನ ರೂಪದ ಪ್ರಶ್ನೆಗಳನ್ನು ಸ್ವೀಕರಿಸಲಾಗುವುದಿಲ್ಲ’ ಎಂದು ಸೂಚಿಸಲಾಗಿದೆ.

ಸಾರ್ವಜನಿಕರು ಇದೇ 30ರೊಳಗೆmghegde04@gmail.com ಗೆ ಪ್ರಶ್ನೆಗಳನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 8971892110ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.